ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪ್ರಚಾರಕ್ಕೆ ಬಿಜೆಪಿಯಿಂದ  25 ಸೆಮಿನಾರ್ ಆಯೋಜನೆ!

bjp
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ (27-12-2020): ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪ್ರಚಾರಕ್ಕೆ ಬಿಜೆಪಿ ಮುಂದಿನ ಕೆಲವು ದಿನಗಳಲ್ಲಿ ಸುಮಾರು 25 ವೆಬ್‌ನಾರ್‌ಗಳನ್ನು ಆಯೋಜಿಸಲಿದೆ. ಅದರಲ್ಲಿ ಬಿಜೆಪಿಯ ಹಿರಿಯ ನಾಯಕರು, ಕಾನೂನು ತಜ್ಞರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ   ಈ ತಿಂಗಳ ಅಂತ್ಯದ ವೇಳೆಗೆ 25 ಸೆಮಿನಾರ್ಗಳನ್ನು ನಡೆಸಲು ನಾವು ತೀರ್ಮಾನಿಸಿದ್ದೇವೆ ಎಂದು ಪಕ್ಷದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮೋದಿ ಲೋಕಸಭೆಯಿಂದ ರಾಜ್ಯ ಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳವರೆಗಿನ ಎಲ್ಲ ಚುನಾವಣೆಗಳನ್ನು ಒಟ್ಟಿಗೆ ನಡೆಸಬೇಕೆಂದು ಪ್ರತಿಪಾದಿಸಿದ್ದಾರೆ.

ದೇಶದಾದ್ಯಂತ ಆಗಾಗ್ಗೆ ನಡೆಯುತ್ತಿರುವ ಮತದಾನದ ಪ್ರಕ್ರಿಯೆಯಿಂದ ಅಭಿವೃದ್ದಿ ಕೆಲಸಕ್ಕೆ ಅಡ್ಡಿಯಾಗುತ್ತಿದೆ ಎಂದ ಮೋದಿ ಒಂದು ದೇಶ, ಒಂದು ಚುನಾವಣೆ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಆಳವಾದ ಅಧ್ಯಯನ ಮತ್ತು ಚರ್ಚೆ ನಡೆಸುವುದು ಅತ್ಯಗತ್ಯ ಎಂದು ಮೋದಿ ಹೇಳಿದ್ದಾರೆ. ನ್ಯಾಯಮೂರ್ತಿ ಬಿ ಎಸ್ ಚೌಹಾಣ್ ಅವರ ನೇತೃತ್ವದ ಕಾನೂನು ಆಯೋಗವು ಸಾರ್ವಜನಿಕ ಹಣವನ್ನು ಉಳಿಸಲು ಲೋಕಸಭೆ ಮತ್ತು ರಾಜ್ಯ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಶಿಫಾರಸು ಮಾಡಿತ್ತು. ಆದರೆ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ ಕರಡಿನಲ್ಲಿ ಸಂವಿಧಾನದಲ್ಲಿನ ಅಸ್ತಿತ್ವದಲ್ಲಿರುವ ಚೌಕಟ್ಟಿನೊಳಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು