01 ರಿಂದ 05 ನೇ ತರಗತಿವರೆಗೆ ಇನ್ನೂ ಕೂಡ ಬೋಧನೆ ನಡೆಸುತ್ತಿದ್ದರೆ ಹುಷಾರ್!!! -ಶಿಕ್ಷಣ ಸಚಿವ ಸುರೇಶ್ ಕುಮಾರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು :ರಾಜ್ಯ ಸರಕಾರವು ಆದೇಶಿಸಿದ ನಿಯಮವನ್ನು ಮೀರಿ 1 ರಿಂದ 5 ನೇ ತರಗತಿವರೆಗೆ ಭೋದಿಸುತ್ತಿರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

ಮಕ್ಕಳ ಆರೋಗ್ಯದ ಯೋಗಕ್ಷೇಮಕ್ಕಾಗಿ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಮೀರಲು ಯಾರಿಗೂ ಅವಕಾಶವಿಲ್ಲ.ಕೊರೋನಾ ಹಿನ್ನೆಲೆಯಲ್ಲಿ ಪ್ರಸಕ್ತ 6-10ನೇ ತರಗತಿವರೆಗೆ ಮಾತ್ರ ಬೋಧನೆಗೆ ಶಾಲೆಗಳಿಗೆ ಸರಕಾರ ಅವಕಾಶ ನೀಡಿದೆ.ಆದರೆ ಕೆಲ ಖಾಸಗಿ ಸಂಸ್ಥೆಗಳು ನಿಯಮವನ್ನು ಮೀರಿ 1-5ನೇ ತರಗತಿವರೆಗೆ ಬೋಧನೆ ನಡೆಸುತ್ತಿದೆ.ಅದಲ್ಲದೆ ಹಾಜರಾತಿಯನ್ನೂ ಕಡ್ಡಾಯಗೊಳಿಸಿದ್ದಾರೆ.
ಅಂತಹ ಶಿಕ್ಷಣ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳಿಗೆ ಶಿಕ್ಷಣ ಸಚಿವ ಖಡಕ್ ಸೂಚನೆಯನ್ನು ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು