ಒಮನ್: ಉದ್ಯೋಗ ಬದಲಾಯಿಸಲು ಅಗತ್ಯವಾಗಿರುವ ‘ಎನ್ಒಸಿ’ ರದ್ದು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಸ್ಕತ್(6-12-2020): ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗಕ್ಕೆ ಸೇರಲು ಅಗತ್ಯವಾಗಿರುವ ‘ಎನ್ಒಸಿ’ ರದ್ದಾಗಲಿದೆ. ಮತ್ತು ಈ ಬದಲಾವಣೆಯು ಈ ವಾರಾಂತ್ಯದೊಳಗೆ ಜಾರಿಯಾಗಲಿದೆ.

ನೋ ಒಬ್ಜೆಕ್ಷನ್ ಸೆರ್ಟಿಫಿಕೇಟ್(ಎನ್.ಒ.ಸಿ) ರದ್ದು ಒಮನಿನ ಉದ್ಯೋಗ ನಿಯಮಾವಳಿಗಳಲ್ಲಿ ಒಂದು ಮಹತ್ವಪೂರ್ಣ ಬದಲಾವಣೆಯಾಗಿದೆ. ಇದರ ಜೊತೆಜೊತೆಗೆ ವಿವಿಧ ಸಬ್ಸಿಡಿಗಳನ್ನು ರದ್ದು ಮಾಡುವುದು, ಪರಿಷ್ಕೃತ ಆದಾಯ ತೆರಿಗೆ ಪದ್ಧತಿ ಸೇರಿದಂತೆ ಹತ್ತು ಹಲವು ಕಾನೂನಿನ ಬದಲಾವಣೆಯೂ ಜಾರಿಗೆ ಬರಲಿದೆ.

ಒಮನಿನಲ್ಲಿ ವಾಸಿಸುತ್ತಿರುವ ಅನಿವಾಸಿಗಳು ಒಬ್ಬ ಉದ್ಯೋಗದಾತನ ಅಧೀನದಿಂದ ಇನ್ನೊಬ್ಬ ಉದ್ಯೋಗದಾತನ ಅಧೀನದಲ್ಲಿ ಉದ್ಯೋಗ ಮಾಡಲು ಮೊದಲ ಉದ್ಯೋದದಾತನಿಂದ ಅನುಮತಿ ಪತ್ರವನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಈ ವರ್ಷದ ಜೂನ್ ತಿಂಗಳಲ್ಲೇ ಇದು ರದ್ದಾಗಲಿದೆಯೆಂದು ಒಮನ್ ಘೋಷಿಸಿತ್ತು. ಇದೀಗ ವಾರದೊಳಗೆ ಜಾರಿಯಾಗಲಿದೆಯೆಂದು ಒಮನ್ ವಿದೇಶಾಂಗ ಸಚಿವ ಸಯ್ಯಿದ್ ಬದರ್ ಅಲ್-ಬುಸೈದಿ ಹೇಳಿದ್ದಾರೆ.

ಒಮನ್ ದೇಶದ ಅರ್ಥ ವ್ಯವಸ್ಥೆಯನ್ನು ಹೆಚ್ಚು ಮುಕ್ತವಾಗಿಸುವ ವಿಸನ್ 2040 ಯೋಜನೆಯ ಅಂಗವಾಗಿ ಇಂತಹ ಅಮೂಲಾಗ್ರ ಬದಲಾವಣೆಗಳಿಗೆ ಒಮನ್ ಸಿದ್ಧವಾಗುತ್ತಿದೆ.

ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ನೂರು ದೇಶಗಳ ಪ್ರಜೆಗಳಿಗೆ ಒಂದು ತಿಂಗಳ ಕಾಲಾವಧಿಗೆ ವೀಸಾ ರಹಿತವಾಗಿ ಒಮನಿಗೆ ಪ್ರಯಾಣಿಸಲು ಅನುಮತಿ ನೀಡಲಿರುವುದಾಗಿಯೂ ಅಲ್-ಬುಸೈದಿ ಹೇಳಿದರು

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು