ನಾಳೆಯಿಂದ ಭಾರತಕ್ಕೆ “ಒಮನ್ ಏರ್” ವಿಮಾನಗಳ ಸೇವೆ ಆರಂಭ

oman air
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಲ್ಫ್ ನ್ಯೂಸ್(07-10-2020): ಕೊರೋನಾ ತಂದ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಮನ್ ಮತ್ತು ಭಾರತದ ನಡುವೆ ಇತ್ತೀಚೆಗೆ ವಿಶೇಷ ವಿಮಾನಯಾನ ಒಪ್ಪಂದ ನಡೆದಿತ್ತು. ಅದರ ಪ್ರಕಾರ “ಒಮನ್ ಏರ್” ವಿಮಾನಗಳು ಈ ತಿಂಗಳ 8ನೆಯ ತಾರೀಕಿನಿಂದ ಭಾರತಕ್ಕೆ ವೈಮಾನಿಕ ಸೇವೆಗಳನ್ನು ಆರಂಭಿಸಲಿದೆ. ಒಮನಿನಿಂದ ದೆಹಲಿ, ಮುಂಬಯಿ, ಕೊಚ್ಚಿ ನಗರಗಳಿಗೆ ಈ ಸೇವೆ ದೊರೆಯಲಿದೆ .

ವಾರಕ್ಕೆ ಎರಡು ಸಲ ಈ ಸೇವೆ ಲಭ್ಯವಿದ್ದು, ಪ್ರತಿಯೊಂದು ವಿಮಾನಗಳೂ ಮಸ್ಕತಿನಿಂದಲೇ ಹೊರಡಲಿದೆ. ದೆಹಲಿಗಿರುವ ವಿಮಾನಯಾನ ಸೇವೆ ಸೋಮವಾರ ಮತ್ತು ಬುಧವಾರ ಆಗಿದ್ದರೆ, ಮುಂಬಯಿ, ಕೊಚ್ಚಿಗಳಿಗೆ ಆದಿತ್ಯವಾರ ಮತ್ತು ಗುರುವಾರವೆಂದು ನಿಶ್ಚಯಿಸಲಾಗಿದೆ.

ಭಾರತದಲ್ಲಿ ಕೋರೋನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಏರುತ್ತಿದ್ದರೆ, ಒಮನಿನಲ್ಲಿ ಒಂದು ಹಂತದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಈ ಮಧ್ಯೆ ವಿಮಾನಯಾನ ಸೇವೆ ಆರಂಭವಾಗಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು