ವೈಯಕ್ತಿಕ ಆದಾಯ ತೆರಿಗೆ ವಿಧಿಸುವ ಮೊದಲ ಕೊಲ್ಲಿ ದೇಶವಾಗಲಿರುವ ಒಮನ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಸ್ಕತ್(2-11-2020): ಈ ವರೆಗೆ ಯಾವುದೇ ಕೊಲ್ಲಿ ದೇಶಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿಧಿಸುವ ಪದ್ಧತಿ ಇರಲಿಲ್ಲ. ಆದರೆ ಒಮನ್ ಇನ್ನು ಮುಂದೆ ವೈಯಕ್ತಿಕ ಆದಾಯ ತೆರಿಗೆ ವಿಧಿಸಲಿದೆಯೆಂದು ವರದಿಯಾಗಿದೆ.

ಕೋರೋನಾ ಸಂದಿಗ್ಧತೆ ಮತ್ತು ತೈಲ ಬೆಲೆ ಕುಸಿತ ಒಮನ್ ದೇಶವನ್ನೂ ಬಾಧಿಸಿದ್ದು, ಮುಂದೆ ಮಂಡಿಸಲಿರುವ ಬಜೆಟಿಗೆ ಅನುಗುಣವಾಗಿ ಆದಾಯ ಮೂಲವನ್ನು ಪುನರ್ ಪರಿಶೀಲನೆ ನಡೆಸುವ ಅನಿವಾರ್ಯತೆ ಅದರ ಮುಂದಿದೆ. ಈ ಹಿನ್ನೆಲೆಯಲ್ಲಿ 2022 ರಿಂದ ಹೆಚ್ಚಿನ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆ ವಿಧಿಸಲಾಗುವುದು ಎಂದು ಹಣಕಾಸು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2020-24 ಸಾಲಿನ ಎಕನಾಮಿಕ್ ಸ್ಕೀಮ್ ಸುಲ್ತಾನ್ ಹತಮಿ ತಾರಕರಿಂದ ಅಂಗೀಕೃತಗೊಂಡಿದೆ. ಐಎಮ್ಎಫ್ ನಿಂದ ಪಡೆದ ಆರ್ಥಿಕ ಮಾಹಿತಿಗಳ ಆಧಾರದಲ್ಲಿ ಪ್ರಮುಖ ವಿಚಾರಗಳನ್ನು ಇದರಲ್ಲಿ ಅಡಕಗೊಳಿಸಲಾಗಿದ್ದು, ಆಂತರಿಕ ಉತ್ಪಾದನೆಯನ್ನು ಮತ್ತು ಆದಾಯ ಮೂಲವನ್ನು ಹೆಚ್ಚಿಸುವ ಗುರಿಯಿರಿಸಲಾಗಿದೆ.

ಈ ಸ್ಕೀಮಿನ ಭಾಗವಾಗಿ ಮುಂದಿನ ವರ್ಷದಿಂದ ವ್ಯಾಟ್ ಜಾರಿಗೆ ಬರಲಿದೆ. ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿ, ಪ್ರವಾಸೋದ್ಯಮ, ವಿದೇಶೀ ಹೂಡಿಕೆಗಳನ್ನು ಹೆಚ್ಚಿಸುವುದು, ಹಲವು ದೇಶಗಳ ಪ್ರಜೆಗಳಿಗೆ ವೀಸಾ ಇಲ್ಲದೇ ಒಮನಿಗೆ ಪ್ರಯಾಣಿಸುವ ಅವಕಾಶ ಇತ್ಯಾದಿ ಯೋಜನೆಗಳು ಅದರಲ್ಲಿ ಅಡಕವಾಗಿವೆ.

ಹೆಚ್ಚು ಆದಾಯವನ್ನು ಹೊಂದಿರುವ ಪ್ರಜೆಗಳಿಗೂ, ವಿದೇಶೀಯರಿಗೂ ಈ ವೈಯಕ್ತಿಕ ಆದಾಯ ತೆರಿಗೆ ಅನ್ವಯವಾಗಲಿದ್ದು, ಎಷ್ಟು ಪ್ರಮಾಣದ ಆದಾಯ ಹೊಂದಿರುವವರು, ಮತ್ತು ಯಾವೆಲ್ಲಾ ಕ್ಷೇತ್ರದಲ್ಲಿರುವವರು ಇದರಲ್ಲಿ ಒಳಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಈ ವಿಚಾರವಾಗಿ ಹೆಚ್ಚಿನ ಅಧ್ಯಯನ ನಡೆಸುತ್ತಿರುವುದಾಗಿ ಸಚಿವಾಲಯ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು