ಮಸ್ಕತ್(4-11-2020): ಅನಧಿಕೃತವಾಗಿ ಒಟ್ಟು ಗೂಡಿದ ಗುಂಪನ್ನು ಪೋಲೀಸರು ತಮ್ಮ ವಶಕ್ಕೆ ತೆಗೆದುಕೊಂಡದ್ದಾರೆ. ಗುಂಪಿನಲ್ಲಿ ಒಬ್ಬ ಒಮನ್ ಪ್ರಜೆಯೂ, ಹಲವಾರು ವಿದೇಶಿಯರೂ ಇದ್ದರು.
ಕೊರೋನಾ ಮುಂಜಾಗ್ರತಾ ಕ್ರಮಗಳ ಭಾಗವಾಗಿ ಒಮನ್ ಸುಪ್ರೀಂ ಕಮಿಟಿ ಜನರಿಗೆ ಹಲವು ಮಾರ್ಗಸೂಚಿಗಳನ್ನು ನಿರ್ದೇಶಿಸಿದೆ. ಇವುಗಳನ್ನು ಉಲ್ಲಂಘಿಸಿದ ಈ ಗುಂಪನ್ನು ದೊಫಾರ್ ಗವರ್ನರೇಟ್ ಪೋಲೀಸ್ ಕಮಾಂಡ್ ಬಂಧಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ರೋಯಲ್ ಒಮನ್ ಪೋಲೀಸ್ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.