ಒಮನ್ ಹೊರತಾದ ಎಲ್ಲಾ ಕೊಲ್ಲಿ ದೇಶಗಳಲ್ಲೂ ಮಂಗಳವಾರ ರಮದಾನ್ ತಿಂಗಳು ಆರಂಭ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಿಯಾದ್: ಒಮನ್ ಹೊರತಾದ ಎಲ್ಲಾ ಕೊಲ್ಲಿ ದೇಶಗಳಲ್ಲೂ ಮಂಗಳವಾರದಿಂದ ರಮದಾನ್ ತಿಂಗಳು ಆರಂಭವಾಗಲಿದೆ.

ಸೌದಿ ಅರೇಬಿಯಾದ ವಿವಿಧ ಕಡೆಗಳಲ್ಲಿ ಚಂದ್ರ ದರ್ಶನಕ್ಕಾಗಿ ಜನರು ಕಾದು ಕುಳಿತಿದ್ದರೂ ಎಲ್ಲಿಯೂ ಕಂಡು ಬಂದಿಲ್ಲ. ಹೀಗಾಗಿ ಮಂಗಳವಾರದಿಂದಲೇ ಉಪವಾಸದ ತಿಂಗಳು ಆರಂಭವಾಗುವುದು ಖಚಿತವಾಗಿದೆ.

ಇಂದು ಚಂದ್ರ ದರ್ಶನದ ನಿರೀಕ್ಷೆಯಿಲ್ಲವೆಂದು ಅಲ್ ಖಾಸಿಮ್ ವಿಶ್ವವಿದ್ಯಾಲಯದ ಅಬ್ದುಲ್ಲಾ ಅಲ್ಮಿಸ್ನದ್ ಸೇರಿದಂತೆ ಹಲವು ಖಗೋಳ ಶಾಸ್ತ್ರಜ್ಞರೂ ಅಭಿಪ್ರಾಯ ಪಟ್ಟಿದ್ದಾರೆ.

ಕತರ್ ವಕ್ಫ್ ಸಚಿವಾಲಯವೂ ಕೂಡಾ ಎಪ್ರಿಲ್ ಹದಿಮೂರು ಮಂಗಳವಾರದಂದು ರಮದಾನ್ ತಿಂಗಳು ಆರಂಭವಾಗುವುದೆಂದು ಪ್ರಕಟಿಸಿದೆ. ಭಾನುವಾರದಂದು ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಸೋಮವಾರವು ಶಾಬಾನ್ ತಿಂಗಳ ಕೊನೆಯ ದಿನ ಮತ್ತು ಮಂಗಳವಾರವು ರಮಳಾನ್ ತಿಂಗಳ ಮೊದಲ ದಿನವಾಗಲಿದೆಯೆಂದು ಅದು ತಿಳಿಸಿದೆ.

ಇನ್ನು ಯುಎಇ, ಕುವೈತ್, ಬಹ್ರೈನ್ ಗಳಲ್ಲೂ ಎಪ್ರಿಲ್ ಹದಿಮೂರು ಮಂಗಳವಾರದಂದೇ ರಮದಾನ್ ವೃತಾರಂಭ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು