ಮಸ್ಕತ್(4-11-2020): ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್ ಚೀಲಗಳಿಗೆ ಮುಂದಿನ ವರ್ಷದ ಜನವರಿಯಿಂದ ನಿಷೇಧ ಹೇರಲಾಗುವುದು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇಂತಹ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಕಳೆದ ಎರಡು ವರ್ಷದಿಂದ ಈ ಬಗ್ಗೆ ಚಿಂತನೆ ನಡೆಸುತ್ತಿದ್ದು, ಇನ್ನು ಮುಂದೆ ಭಾರವಿಲ್ಲದ ಸಣ್ಣ ಪ್ಲಾಸ್ಟಿಕ್ ಬ್ಯಾಗುಗಳಿಗೆ ನಿಷೇಧವಿರಲಿದೆಯೆಂದು ಪರಿಸರ ಸಂರಕ್ಷಣಾ ಸಚಿವಾಲಯ ತಿಳಿಸಿದೆ. ಕಾನೂನು ಉಲ್ಲಂಘಿಸುವವರಿಗೆ ನೂರು ರಿಯಲಿನಿಂದ ಎರಡು ಸಾವಿರ ರಿಯಲ್ ವರೆಗೆ ದಂಡ ವಿಧಿಸಲಾಗುವುದು.
ಕಾನೂನು ಉಲ್ಲಂಘಿಸುವುದನ್ನು ಪುನರಾವರ್ತಿಸಿದರೆ ದುಪ್ಪಟ್ಟು ದಂಡವನ್ನು ವಿಧಿಸಲಾಗುವುದೆಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಪ್ಲಾಸ್ಟಿಕ್ ಚೀಲಗಳ ಬದಲು ಕಾಗದ ಮತ್ತು ಬಟ್ಟೆಗಳಿಂದ ಮಾಡಿದ ಚೀಲಗಳನ್ನು ಬಳಸುವಂತೆ ಅದು ಸಲಹೆ ನೀಡಿದೆ.