ದುಬೈ (12/10/2020): ಒಮಾನ್ ನಲ್ಲಿ ಮತ್ತೆ ಲಾಕ್ ಡೌನ್ ಘೋಷಣೆಯಾಗಿದೆ. ರಾತ್ರಿ 8 ಗಂಟೆಯಿಂದ ಮುಂಜಾನೆ 5ಗಂಟೆಯವರೆಗೆ ಜನರು ಹೊರಗಿಳಿಯುವಂತಿಲ್ಲ. ಅಂಗಡಿ ಮುಗ್ಗಟ್ಟುಗಳು ತೆರೆಯುವಂತಿಲ್ಲ ಎಂದು ಕೋವಿಡ್ 19 ಸುಪ್ರೀಂ ಕಮಿಟಿ ಪ್ರಕಟಿಸಿದೆ.
ಅಕ್ಟೋಬರ್ 24ರವರೆಗೂ ಲಾಕ್ ಡೌನ್ ಇರಲಿದೆ. ಆದರೆ, ಮುಂದಿನ ಆದೇಶ ಹೊರಡುವವರೆಗೂ ಬೀಚ್ ಗಳು ಹಗಲು ರಾತ್ರಿ ತೆರೆಯುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.