ನಾಳೆಯಿಂದ ಒಮನಿನಲ್ಲಿ ರಾತ್ರಿ ಕರ್ಪ್ಯೂ!

oman
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಲ್ಫ್ ನ್ಯೂಸ್(10-10-2020): ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡ ಹಿನ್ನೆಲೆಯಲ್ಲಿ ಒಮನಿನಲ್ಲಿ ಮತ್ತೆ ರಾತ್ರಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ರಾತ್ರಿ 8ರಿಂದ ಮುಂಜಾನೆ 5ರವರೆಗೆ ಸಂಚಾರ ನಿಷೇಧಿಸಲಾಗಿದೆ. ವ್ಯಾಪಾರ ಮಳಿಗೆಗಳೂ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಜನ ಸಂಚಾರಕ್ಕೆ  ಅವಕಾಶವಿರುವುದಿಲ್ಲ.

ಅಕ್ಟೋಬರ್‌ 11ರಿಂದ 24ರವರೆಗೆ ಎರಡು ವಾರಗಳ ಕಾಲ ರಾತ್ರಿ ಸಂಚಾರ ನಿಷೇಧಿಸಲು ಸರಕಾರದ ಉನ್ನತ ಸಮಿತಿಯು ತೀರ್ಮಾನಿಸಿದೆಯೆಂದು ಒಮನ್ ಟೆಲಿವಿಷನ್ ಬಿತ್ತರಿಸಿದೆ. ಬೀಚ್ಗಳಿಗೆ ತೆರಳದಂತೆ 24ಗಂಟೆಯೂ ನಿರ್ಬಂಧ ವಿಧಿಸಲಾಗಿದೆ. ಈ ಮೊದಲು ನಿಷೇಧದಿಂದ ರಿಯಾಯಿತಿ ಗಿಟ್ಟಿಸಿಕೊಂಡ ಕೆಲವು ವಾಣಿಜ್ಯ ಮಳಿಗೆಗಳಿಗೂ ಕೊರೋನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ನಿರ್ಲಕ್ಷಿಸಿದ ಕಾರಣಕ್ಕೆ ಈ ಬಾರಿ ನಿಷೇಧ ಬಿದ್ದಿದೆ.

ಕೆಲವು ವಾರಗಳ ಮೊದಲು ಒಮನಿನಲ್ಲಿ ಹೊಸದಾಗಿ ಕೊರೋನಾ ಸೋಂಕು ತಗಲುವವರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ವ್ಯಾಪಾರ ಮಳಿಗೆಗಳೂ ತೆರೆದಿದ್ದವು. ಈ ತಿಂಗಳ ಒಂದರಿಂದ ಒಮನಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳೂ ಕಾರ್ಯಾಚರಿಸಲು ತೊಡಗಿದ್ದವು. ಈ ನಡುವೆ ಕೋರೋನಾ ಸೋಂಕಿತರ ಸಂಖ್ಯೆಯು ತೀವ್ರ ಏರುಗತಿಯಲ್ಲಿ ಸಾಗಿತು‌.  ಗಂಭೀರಾವಸ್ಥೆಯಲ್ಲಿರುವವರ ಸಂಖ್ಯೆಯೂ, ಮರಣ ಹೊಂದುವವರ ಸಂಖ್ಯೆಯೂ ಏರತೊಡಗಿತು. ಹೀಗಾಗಿ ಒಮನ್ ಮತ್ತೆ ಲಾಕ್‌ಡೌನಿಗೆ ಜಾರಿದೆ.

ಸಾರ್ವಜನಿಕರು, ಅದರಲ್ಲೂ ಯುವಕರು ಕೊರೋನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಸರಿಯಾಗಿ ಪಾಲಿಸಬೇಕು. ಕುಟುಂಬದೊಳಗೂ ಸೇರಿದಂತೆ, ಎಲ್ಲಾ ರೀತಿಯ ಒಟ್ಟುಗೂಡುವಿಕೆಯನ್ನೂ ತ್ಯಜಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಗೊಳ್ಳಲಾಗುವುದೆಂದು ಸುಪ್ರೀಂ ಕಮಿಟಿ ಹೇಳಿದೆ. ಕಾನೂನು ಪಾಲಿಸದವರ ಹೆಸರುಗಳನ್ನೂ, ಅವರ ಫೋಟೋಗಳನ್ನು ಬಹಿರಂಗಗೊಳಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ನಿಷೇಧವಿದ್ದರೂ ಕೂಡಾ ವಿಮಾನ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು