ಒಕ್ಕೂಟ ಸರಕಾರದಿಂದ ಟ್ವಿಟರಿಗೆ ಕಟ್ಟ ಕಡೆಯ ನೋಟೀಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಟ್ವಿಟರ್ ಮತ್ತು ಒಕ್ಕೂಟ ಸರಕಾರದ ನಡುವಿನ ಸಂಘರ್ಷ ತಾರ್ಕಿಕ ಅಂತ್ಯಕ್ಕೆ ಬರುವ ಸೂಚನೆಗಳು ಕಂಡು ಬರುತ್ತಿದೆ. ಪ್ರತಿಕ್ರಿಯೆ ಕೋರಿ ಒಕ್ಕೂಟ ಸರಕಾರವು ಟ್ವಿಟರಿಗೆ ಕಟ್ಟ ಕಡೆಯ ಅವಕಾಶ ನೀಡಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರಿಗೆ ನೋಟೀಸ್ ನೀಡಿದ್ದು, ಅದರಂತೆ ಟ್ವಿಟರ್ ಸಂಸ್ಥೆಯು ನೋಟೀಸಿಗೆ ಪ್ರತಿಕ್ರಿಯೆ ನೀಡದಿದ್ದರೆ, ಸೂಕ್ತ ಕ್ರಮ ಕೈಗೊಳ್ಳುವ ಮುನ್ನೆಚ್ಚರಿಕೆ ನೀಡಿದೆ.

ವರೆಗೂ ಸರಕಾರ ನೀಡಿದ ನೋಟೀಸುಗಳಿಗೆ ಟ್ವಿಟರ್ ಉತ್ತರಿಸಿಲ್ಲ. ಬಾರಿ ಸೂಕ್ತ ಉತ್ತರ ನೀಡಲಿದೆಯೆಂಬ ನಿರೀಕ್ಷೆಯಿದೆ. ಉತ್ತರಿಸಬೇಕು ಅಥವಾ ನೂತನ ಕಾನೂನುಗಳನ್ನು ಪಾಲಿಸಿ, ಅದರ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ಒಪ್ಪಿಸಬೇಕು ಎಂದು ನೋಟೀಸಿನಲ್ಲಿ ಹೇಳಲಾಗಿದೆ.

ಒಂದು ವೇಳೆ ಬಾರಿಯೂ ಉತ್ತರಿಸದಿದ್ದಲ್ಲಿ, ಟ್ವಿಟರ್ ಸಂಸ್ಥೆಗೆ ದೇಶದಲ್ಲಿ ಕಾನೂನಾತ್ಮಕ ಸಂರಕ್ಷಣೆ ದೊರೆಯುವುದಿಲ್ಲ ಎಂದೂ ಎಚ್ಚರಿಕೆ ನೀಡಲಾಗಿದೆ. ಇತ್ತೀಚೆಗಷ್ಟೇ ದೆಹಲಿ ಹೈಕೋರ್ಟ್ ಕೂಡಾ ಸರಕಾರದ ನೂತನ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಟ್ವಿಟರಿಗೆ ಹೇಳಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು