ಕುವೈತ್(11/10/2020): ತೈಲ ಮಾರುಕಟ್ಟೆಯ ಅತ್ಯಂತ ಕೆಟ್ಟ ದಿನಗಳು ಕಳೆದು ಹೋದವು ಎಂದು ತೈಲ ಉತ್ಪಾದಕ ದೇಶಗಳ ಒಕ್ಕೂಟ “ಒಪೆಕ್” ಕಾರ್ಯದರ್ಶಿ ಜನರಲ್ ಮುಹಮ್ಮದ್ ಬಾರ್ಕಿಂಡೋ ಹೇಳಿದರು.
ಕೊರೋನಾ ಪರಿಸ್ಥಿತಿಯು ತೈಲ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ತೈಲೋತ್ಪಾದನೆ ಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದಷ್ಟು ಸಮಸ್ಯೆಗಳು ತಲೆದೂರಿದ್ದವು. ಎಪ್ರಿಲ್ ತಿಂಗಳಿನಿಂದ ಬೇಡಿಕೆ ಕುಂಠಿತಗೊಂಡು, ತೈಲ ಬೆಲೆಯಲ್ಲಿ ನಿರಂತರ ಇಳಿಕೆ ಕಂಡಿತ್ತು. ಇದರಿಂದಾಗಿ ತೈಲೋತ್ಪಾದನೆಯೂ ಕಡಿಮೆಯಾಗಿ, ಮುಂದೇನು ಮಾಡುವುದೆಂದು ತೋಚದಂತಹಾ ಪರಿಸ್ಥಿತಿಯಿತ್ತು. ಈಗ ಅವೆಲ್ಲವೂ ತಿಳಿಯಾಗಿದ್ದು, ಇದಕ್ಕಿಂತ ದೊಡ್ಡ ಸವಾಲು ಮುಂದೆ ಬರಲಾರದು ಎಂದು ಅವರು ಹೇಳಿದರು.
ಕುವೈತಿನಲ್ಲಿ ನಡೆದ ವರ್ಲ್ಡ್ ಓಯಿಲ್ ಔಟ್ಲೆಟ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು