ನವದೆಹಲಿ(19-12-2020): ಅಡುಗೆ ಎಣ್ಣೆ ಬೆಲೆ ಶೇ.35 ರಿಂದ 45 ರಷ್ಟು ಏರಿಕೆಯಾಗಿದೆ. ಇದರಿಂದ ಸಾಮಾನ್ಯ ವರ್ಗದ ಜನರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ.
ಪಾಮ್ ಎಣ್ಣೆ ಬೆಲೆ 6 ತಿಂಗಳ ಹಿಂದೆ ಲೀಟರ್ಗೆ 65 ರಿಂದ 75ರೂ. ನಷ್ಟಿತ್ತು. ಆದರೆ ನಂತರ 100 ರೂಪಾಯಿಯಿಂದ 120 ರೂ. ಬಳಿಕ ಇದೀಗ 140ರವರೆಗೂ ತಲುಪಿದೆ.
ಈ ಮೊದಲು ಅಡುಗೆ ಎಣ್ಣೆ ಬೆಲೆ ಏರಿಕೆ ಕಾರಣ ಬೇರೆ ಬೇರೆ ದೇಶಗಳಿಂದ ಪಾಮ್ ಎಣ್ಣೆಯನ್ನು ಆಮದು ಮಾಡಲಾಗುತ್ತಿತ್ತು. ಆದರೆ ಇದೀಗ ಕೊರೊನಾದಿಂದಾಗಿ ಇದಕ್ಕೆ ಅಡ್ಡಿಯಾಗಿದೆ. ಮತ್ತು ವ್ಯಾಪಕ ಮಳೆಯಿಂದಾಗಿ ಸೇಂಗಾ, ಸೂರ್ಯಕಾಂತಿ, ಬೆಳೆಗಳು ನಾಶವಾಗಿ ಎಣ್ಣೆ ಉತ್ಪಾದನೆ ಮೇಲೂ ಪ್ರಭಾವ ಬೀರಿದೆ.