ಅಪ್ರಾಪ್ತ ಬಾಲಕನಿಗೆ ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ| ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶ

sp
Share on facebook
Share on twitter
Share on linkedin
Share on whatsapp
Share on telegram
Share on email
Share on print

ಭುವನೇಶ್ವರ (05-01-2021): ಉದಿತ್ ನಗರ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕನಿಗೆ ಮೂರನೇ ಹಂತದ ಚಿತ್ರಹಿಂಸೆ ನೀಡಲಾಗಿದೆಯೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ   ಫೆಬ್ರವರಿ 15 ರೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಒಡಿಶಾ ಮಾನವ ಹಕ್ಕುಗಳ ಆಯೋಗ (ಒಎಚ್‌ಆರ್‌ಸಿ) ರೂರ್ಕೆಲಾ ಎಸ್‌ಪಿಗೆ ಸೂಚಿಸಿದೆ.

ರೂರ್ಕೆಲಾ ಟಿಂಬರ್ ಕಾಲೋನಿಗೆ ಸೇರಿದ ಅಪ್ರಾಪ್ತ ಬಾಲಕನನ್ನು ರೂರ್ಕೆಲಾದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಆತನಿಗೆ ಬೂಟ್ ನಿಂದ ಒದೆಯಲಾಗಿದೆ. ಪೊಲೀಸರು ಬಾಲಕನನ್ನು ಬಾಲಾಪರಾಧ ಕೇಂದ್ರಕ್ಕೆ ಕಳುಹಿಸುವ ಬದಲು, ಯಾವುದೇ ಆಹಾರವನ್ನು ನೀಡದೆ ಪೊಲೀಸ್ ಠಾಣೆಯೊಳಗೆ ಕೂಡಿ ಹಾಕಿದ್ದರು.

ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸುಯೋ ಮೋಟೊ ಪ್ರಕರಣವನ್ನು ದಾಖಲಿಸಿದ ಒಎಚ್‌ಆರ್‌ಸಿ, ರೂರ್ಕೆಲಾ ಎಸ್‌ಪಿಗೆ ಈ ಬಗ್ಗೆ ತನಿಖೆ ಆರಂಭಿಸಿ ಫೆಬ್ರವರಿ 15 ರೊಳಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ನೋಟಿಸ್ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು