ನಾಲ್ವರು ಅಪ್ರಾಪ್ತ ಬಾಲಕರಿಗೆ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ| ವಿದ್ಯುತ್ ಶಾಕ್ ಕೊಟ್ಟು ಥಳಿತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭುವನೇಶ್ವರ(17-02-2021):  ಮಲ್ಕಂಗೇರಿ ಜಿಲ್ಲೆಯ ಚಿತ್ರಕೊಂಡ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರ ಮೇಲೆ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಒಡಿಶಾ ಮಾನವ ಹಕ್ಕುಗಳ ಆಯೋಗ ಸುಯೊ ಮೋಟೋ ಅಡಿ ಕೇಸ್ ದಾಖಲಿಸಿದೆ.

ಆಯೋಗ ಈ ಕುರಿತು ಮಾರ್ಚ್ 30 ರೊಳಗೆ ವರದಿ ಸಲ್ಲಿಸುವಂತೆ  ಮಲ್ಕಂಗಿರಿ ಎಸ್‌ಪಿಗೆ ನಿರ್ದೇಶನ ನೀಡಿದೆ.

ಮಾಹಿತಿಯ ಪ್ರಕಾರ, ಚಿನ್ನದ ಆಭರಣಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಫೆಬ್ರವರಿ 12 ರಂದು ಪೊಲೀಸರು ನಾಲ್ಕು ಬಾಲಕರನ್ನು ತಮ್ಮ ಮನೆಗಳಿಂದ ಎತ್ತಿಕೊಂಡು ಹೋಗಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಅವರನ್ನು ನ್ಯಾಯಾಲಯಕ್ಕೆ ಕಳುಹಿಸುವ ಬದಲು, ಪೊಲೀಸರು ಆರೋಪಿಗಳನ್ನು ಥಳಿಸಿ, ಪೊಲೀಸ್ ಠಾಣೆಯಲ್ಲಿ ನಾಲ್ಕು ದಿನಗಳ ಕಾಲ ವಿದ್ಯುತ್ ಶಾಕ್ ನೀಡಿದ್ದಾರೆ. ಇದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಹೊರಗಿನವರು ಬಂದು ಥಳಿಸಿದ್ದಾರೆ ಎಂದು ನಾಲ್ವರು ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು