ನ್ಯಾಯಾಲಯದ ಕಲಾಪಗಳನ್ನು ಮಾಧ್ಯಮಗಳು ವರದಿ ಮಾಡುವುದನ್ನು ತಡೆಯಲಾಗದು : ಸುಪ್ರೀಮ್ ಕೋರ್ಟ್ | ಮಗದೊಮ್ಮೆ ಮುಖಭಂಗಕ್ಕೊಳಗಾದ ಚುನಾವಣಾ ಆಯೋಗ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ನ್ಯಾಯಾಲಯದ ಕಲಾಪಗಳನ್ನು ಮಾಧ್ಯಮಗಳು ವರದಿ ಮಾಡುವುದನ್ನು ತಡೆಯಲಾಗದು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಮ್ ಕೋರ್ಟ್ ಹೇಳಿದೆ.

ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ತನ್ನ ವಿಚಾರಣೆಯ ನಡುವೆ, ದೇಶದಲ್ಲಿ ಕೋವಿಡ್ ಎರಡನೇ ಅಲೆ ಉಂಟಾಗಲು ಯಾವುದೇ ಮುನ್ನೆಚ್ಚರಿಕೆಯಿಲ್ಲದೇ ಚುನಾವಣೆಗೆ ಅನುಮತಿ ನೀಡಿದ ಚುನಾವಣಾ ಆಯೋಗವೇ ಕಾರಣ ಎಂದಿತ್ತು. ಈ ವಿಚಾರವಾಗಿ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಹೊರಿಸಿ, ಕೇಸು ದಾಖಲಿಸಿದರೂ ತಪ್ಪಲ್ಲ ಎಂದಿತ್ತು.

ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ವಿರುದ್ಧ ಮಾಡಿದ ಟೀಕೆಗಳನ್ನು ಮಾಧ್ಯಮಗಳು ವರದಿ ಮಾಡಿತ್ತು. ಇದರಿಂದ ಸಿಡಿಮಿಡಿಗೊಂಡ ಚುನಾವಣಾ ಆಯೋಗವು ನ್ಯಾಯಾಲಯದೊಳಗೆ ನಡೆಯುವ ವಿಚಾರಣೆಯ ವೇಳೆ ನ್ಯಾಯಾಲಯಗಳು ಹೇಳುವ ಅಭಿಪ್ರಾಯಗಳನ್ನು ಮಾಧ್ಯಮಗಳು ವರದಿ ಮಾಡುವುದನ್ನು ತಡೆಯಬೇಕು. ಮಾಧ್ಯಮಗಳು ಯಾವುದೇ ಪುರಾವೆ ಇಲ್ಲದೇ, ಚುನಾವಣಾ ರ‍್ಯಾಲಿಗಳ ಕುರಿತು ಅನಗತ್ಯ ವರದಿ ಮಾಡುತ್ತಿವೆ ಎಂದು ಸುಪ್ರೀಮ್ಕೋರ್ಟ್ ಗೆ ದೂರು ನೀಡಿತ್ತು.

ದೂರನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್, “ಮಾಧ್ಯಮ ಶಕ್ತಿಯುತವಾದದ್ದು, ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ನಮ್ಮ ತೀರ್ಪುಗಳು ಮಾತ್ರವಲ್ಲ, ಪ್ರಶ್ನೆಗಳು, ಉತ್ತರಗಳು ಮತ್ತು ಸಂಭಾಷಣೆಗಳನ್ನು ಸಾರ್ವಜನಿಕರ ಹಿತಾಸಕ್ತಿ ಮತ್ತು ಕಾಳಜಿಯ ಮೇರೆಗೆ ವರದಿ ಮಾಡುತ್ತವೆ.” ಎಂದಿದೆ.

ಹೀಗಾಗಿ ನ್ಯಾಯಾಲಯವು ವಿಚಾರಣೆಗಳನ್ನು ಮಾಧ್ಯಮಗಳು ವರದಿ ಮಾಡುವುದನ್ನು ತಡೆಯಲು ಆಗದು ಎಂದು ಚುನಾವಣಾ ಆಯೋಗಕ್ಕೆ ಹೇಳಿದೆ. ಕೇಂದ್ರ ಸರಕಾರದ ಅಣಿತಿಯಂತೆ ವರ್ತಿಸುತ್ತಿವೆ ಎಂಬ ಆರೋಪಗಳು ಈಗಾಗಲೇ ಚುನಾವಣಾ ಆಯೋಗದ ಮೇಲಿದೆ. ಮದ್ರಾಸ್ ಹೈಕೋರ್ಟ್ ಬಳಿಕ, ಇದೀಗ ಸುಪ್ರೀಮ್ ಕೋರ್ಟ್‍ ನಲ್ಲೂ ಚುನಾವಣಾ ಆಯೋಗವು ಮುಖಭಂಗಕ್ಕೊಳಗಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು