ನ್ಯಾಯಾಲಯದ ಕದ ತಟ್ಟಿದ ವಾಟ್ಸಪ್ | ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಜಾರಿ ಹಿನ್ನೆಲೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಜಾರಿ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ವಾಟ್ಸಪ್ ಸಂಸ್ಥೆಯು ನ್ಯಾಯಾಲಯದ ಕದ ತಟ್ಟಿರುವುದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ವೇದಿಕೆಗಳಿಗೆ ಅನ್ವಯವಾಗುವಂತೆ ಸರಕಾರವು ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದು ಇಂದಿನಿಂದ ಜಾರಿಯಾಗಿದೆ. ಇದರ ವಿರುದ್ಧ ವಾಟ್ಸಪ್ ಕಾನೂನು ಸಮರಕ್ಕೆ ಮುಂದಾಗಿದ್ದು, ದೆಹಲಿ ಹೈಕೋರ್ಟಿನಲ್ಲಿ ದೂರು ದಾಖಲಿಸಿದೆ.

2007 ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪನ್ನು ಆಧಾರವಾಗಿಟ್ಟುಕೊಂಡು ವಾಟ್ಸಪ್ ಕಾನೂನು ಹೋರಾಟಕ್ಕೆ ಸಿದ್ಧವಾಗುತ್ತಿದೆಯೆನ್ನಲಾಗಿದೆ. ಮೆಸೇಜುಗಳನ್ನು ಟ್ರೇಸ್ ಮಾಡುವುದು ಸಂವಿಧಾನ ವಿರೋಧಿ ಮತ್ತು ಖಾಸಗಿತನದ ಉಲ್ಲಂಘನೆಯೆಂದು ಅಂದು ಸುಪ್ರೀಮ್ ಕೋರ್ಟ್ ತೀರ್ಪು ನೀಡಿತ್ತು.

ನೂತನ ಮಾರ್ಗಸೂಚಿಯಂತೆ ಜಾಣತಾಣಗಳಲ್ಲಿ ಪ್ರಕಟಿಸಲಾಗುವ ಕಾನೂನು ವಿರೋಧಿ ವಿಚಾರಗಳಿಗೆ ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಹೊಣೆಗಾರನಾಗಿದೆ. ಅಂಥವುಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು, ಅಧಿಕಾರಿಯೊಬ್ಬನನ್ನು ನೇಮಿಸಬೇಕಿದ್ದು, ಆತ ಸರಕಾರದ ಸೂಚನೆಗಳನ್ನು ಪಾಲಿಸುತ್ತಿರಬೇಕು.

ಇದಕ್ಕೆ ಹೆಚ್ಚಿನ ಸಂಸ್ಥೆಗಳು ಒಪ್ಪಿದ್ದು, ಜಾರಿಗೊಳಿಸಲು ಸಮಯಾವಕಾಶ ಕೇಳಿದೆ. ಟ್ವಿಟರ್ ಮಾತ್ರ ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಫೇಸ್ಬುಕ್ ಒಡೆತನದಲ್ಲಿರುವ ವಾಟ್ಸಪ್ ನೂತನ ಕಾನೂನಿನ ವಿರುದ್ಧ, ನ್ಯಾಯಾಲಯದ ಮೊರೆ ಹೋಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು