ದುರಂತ: ನೂಡಲ್ಸ್ ತಿಂದು 9 ಮಂದಿ ಸಾವು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೀನಾ(21-10-2020): ನೂಡಲ್ಸ್ ತಿಂದು ಒಂದೇ ಕುಟುಂಬದ 9 ಜನರು ಸಾವನ್ನಪ್ಪಿರುವ ಘಟನೆಯೊಂದು ಚೀನಾದಲ್ಲಿ ನಡೆದಿದ್ದು, ಈ ಕುಟುಂಬದಲ್ಲಿ ಈಗ ಮೂವರು ಮಕ್ಕಳು ಮಾತ್ರವೇ ಬದುಕುಳಿದಿದ್ದಾರೆ.

ಹೋಮ್ ಮೇಡ್ ನೂಡಲ್ಸ್ ನ್ನು ಫ್ರಿಡ್ಜ್ ನಲ್ಲಿಡಲಾಗಿತ್ತು. ಸುಮಾರು 1 ವರ್ಷಗಳಿಂದಲೂ ಇದು ಫ್ರಿಡ್ಜ್ ನಲ್ಲಿ ಹಾಗೆಯೇ ಇತ್ತು. ದೀರ್ಘ ಕಾಲ ಫ್ರಿಡ್ಜ್ ನಲ್ಲಿದ್ದುದರಿಂದ ನೂಡಲ್ಸ್ ಬೊಂಗ್ರೆಕಿಕ್ ಎಂಬ ವಿಷಕಾರಿ ಪದಾರ್ಥವಾಗಿ ಮಾರ್ಪಾಡಾಗಿತ್ತು. ಇದನ್ನು ಗಮನಿಸದೆ ತಿಂದ ಒಂದೇ ಮನೆಯ 9 ಜನರು ಸಾವಿಗೀಡಾಗಿದ್ದಾರೆ.

ಚೀನಾದ ಈಶಾನ್ಯ ಪ್ರಾಂತ್ಯ ಹೆಲಾಂಗ್ಜಿಯಾಂಗ್​ನ ಜಿಕ್ಸಿ ನಗರದ ನಿವಾಸಿಗಳು ಮೃತಪಟ್ಟವರು ಎಂದು ಹೇಳಲಾಗಿದೆ. ಈ ಮೃತರ ಪೈಕಿ 7 ಜನರು ವಯಸ್ಕರು ಎಂದು ಹೇಳಲಾಗಿದೆ.

ಮನೆಯಲ್ಲಿಯೇ ಈ ನೂಡಲ್ಸ್ ನ್ನು ತಯಾರಿಸಲಾಗಿತ್ತು. ಹೀಗಾಗಿ ನೂಡಲ್ಸ್ ರುಚಿಯಾಗಿಲ್ಲ ಎಂದು ಮೂವರು ಮಕ್ಕಳು ತಿಂದಿಲ್ಲ. ಹೀಗಾಗಿ ಅವರು ಸಾವಿನ ದವಡೆಯಿಂದ ಪಾರಾಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು