ಮುಸ್ಲಿಮ್ ಯುವಕರ ವಿರುದ್ಧ NSAಯಡಿ ಪ್ರಕರಣ ದಾಖಲಿಸಿದ ಸರಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್

arrest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಧ್ಯಪ್ರದೇಶ (12-10-2020): ನಾಲ್ವರು ಮುಸ್ಲಿಮ್ ಯುವಕರ ವಿರುದ್ಧ ಎನ್‌ಎಸ್‌ಎಯಡಿ ದಾಖಲಿಸಿದ ಪ್ರಕರಣವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಪಡಿಸಿದೆ, ಪ್ರತಿ ಪ್ರಕರಣಕ್ಕೆ 10 ಸಾವಿರ ರೂ. ದಂಡ ಪಾವತಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್‌ಗರ್ ಜಿಲ್ಲೆಯಲ್ಲಿ ಕಳೆದ ವರ್ಷ ಮೊಹರಂ ಮೆರವಣಿಗೆಯಲ್ಲಿ ಕತ್ತಿ ಸಾಗಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿರುವ ನಾಲ್ವರು ಮುಸ್ಲಿಂ ಯುವಕರ ವಿರುದ್ಧದ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಆರೋಪವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಪಡಿಸಿದೆ.

ಹೈಕೋರ್ಟ್‌ನ ಇಂದೋರ್ ಡಿವಿಷನ್ ಬೆಂಚ್ ಕಠಿಣ ಕಾಯ್ದೆ  ಎನ್‌ಎಸ್‌ಎಯನ್ನು ಹಿಂತೆಗೆದುಕೊಳ್ಳುವುದಲ್ಲದೆ, ನ್ಯಾಯಾಲಯದಲ್ಲಿ ಬಂಧನಕ್ಕೆ ಸಂಬಂಧಿಸಿದಂತೆ ‘ತಪ್ಪಾದ ಹೇಳಿಕೆ’ ಸಲ್ಲಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ 10,000 ರೂ.ಗಳ ದಂಡ ವಿಧಿಸಿದೆ.

ಪ್ರತಿ ಪ್ರಕರಣಕ್ಕೆ 10,000 ರೂ. ಕಾನೂನು ವೆಚ್ಚವಾಗಿ ಪಾವತಿಸಿ ಎಂದು ನ್ಯಾಯಾಲಯ  ಸರಕಾರಕ್ಕೆ ನಿರ್ದೇಶಿಸಿದೆ.

19 ವರ್ಷದ ಆರೋಪಿತ ಹಕೀಂ ಅವರ ಹಿರಿಯ ಸಹೋದರ ಸಲ್ಲಿಸಿದ್ದ ನಾಲ್ಕು ಜಂಟಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎಸ್.ಸಿ.ಶರ್ಮಾ ಮತ್ತು ಶೈಲೇಂದ್ರ ಶುಕ್ಲಾ ಅವರನ್ನೊಳಗೊಂಡ ಇಬ್ಬರು ಸದಸ್ಯರ ಪೀಠವು ಈ ಆದೇಶ ಹೊರಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು