ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಪ್ರಧಾನ

nobel award
Share on facebook
Share on twitter
Share on linkedin
Share on whatsapp
Share on telegram
Share on email
Share on print

ನ್ಯೂಯಾರ್ಕ್(05-10-2020): ಹೆಪಟೈಟಿಸ್ ಸಿ ವೈರಸ್ ಪತ್ತೆ  ಮಾಡಿದ ಮೂವರು ವಿಜ್ಞಾನಿಗಳು ಈ ಬಾರಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೆಪಟೈಟಿಸ್ ಸಿ ವೈರಸ್ ಪತ್ತೆ ಹಚ್ಚಿದ ಹಾರ್ವೆ ಜೆ.ಆಲ್ಟರ್, ಮೈಕೆಲ್ ಹೌಟನ್ ಮತ್ತು ಚಾರ್ಲ್ಸ್ ಎಂ.ರೈಸ್ ಅವರಿಗೆ 2020ರ ನೊಬೆಲ್ ಪ್ರಶಸ್ತಿ ನೀಡಿ ಗೌರಸಲಾಗಿದೆ. ಅ.5 , 2015ಕ್ಕೆ ಇವರು ಹೆಪಟೈಟಿಸ್ ಸಿ ವೈರಸ್ ಪತ್ತೆ ಹಚ್ಚಿದ್ದರು.

ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ಗೆ ಕಾರಣವಾಗುವ ಹೆಪಟೈಟಿಸ್ ಸಿ ವೈರಸ್ ನ್ನು ಗುರುತಿಸುವ ಕೆಲಸಕ್ಕಾಗಿ ಪ್ರಶಸ್ತಿಯನ್ನು ಪಡೆದಿರುವುದಾಗಿ ನೊಬೆಲ್ ಸಮಿತಿಯ ಮುಖ್ಯಸ್ಥ ಥಾಮಸ್ ಪರ್ಲ್ ಮನ್ ಘೋಷಿಸಿದ್ದಾರೆ.

ಸ್ವೀಡನ್ ನ ಕರೋಲಿನ್ಸ್ಕಾ ಇನ್ ಸ್ಟಿಟ್ಯೂಟ್ ನ ಫಿಸಿಯಾಲಜಿ ಅಥವಾ ಮೆಡಿಸಿನ್ ನ ಐದು ಸದಸ್ಯರ ನೊಬೆಲ್ ಸಮಿತಿಯು ನಾಮನಿರ್ದೇಶನಗಳನ್ನು ತಪಾಸಣೆ ಮಾಡಿ ಪ್ರಶಸ್ತಿಯನ್ನು ಘೋಷಿಸಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು