“ನೀವೇನು ‘ದಂತ ಗೋಪುರ’ದಲ್ಲಿ ವಾಸಿಸುತ್ತಿದ್ದೀರಾ..!?” ಆಕ್ಸಿಜನ್ ಕೊರತೆ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ದೆಹಲಿ ಹೈಕೋರ್ಟ್ ಕಟು ವಿಮರ್ಶೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ನೀವೇನುದಂತ ಗೋಪುರದಲ್ಲಿ ವಾಸಿಸಿತ್ತಿದ್ದೀರಾ ಎಂದು ಕೇಂದ್ರ ಸರಕಾರವನ್ನು ದೆಹಲಿ ಹೈಕೋರ್ಟ್ ಕಟು ಶಬ್ಧಗಳಲ್ಲಿ ವಿಮರ್ಶಿಸಿದೆ.

ಆಸ್ಟ್ಟಿಚ್ ಪಕ್ಷಿಯಂತೆ ನೀವು ಮರಳಿನಲ್ಲಿ ನಿಮ್ಮ ತಲೆಯನ್ನು ಹುದುಗಿಸಿಕೊಳ್ಳಬಹುದು. ಆದರೆ ನಾವು ಹಾಗಲ್ಲಎಂದೂ ಕೇಂದ್ರವನ್ನು ತೀವ್ರವಾಗಿ ಛೇಡಿಸಿದೆ.

ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಇಬ್ಬರು ಉನ್ನತ ಅಧಿಕಾರಿಗಳೊಂದಿಗೆ ರೀತಿ ಹೇಳಿದ ಹೈಕೋರ್ಟ್ ನಾಳೆ ನಡೆಯಲಿರುವ ವರ್ಚುವಲ್ ವಿಚಾರಣೆಯಲ್ಲಿ ಭಾಗವಹಿಸಬೇಕೆಂದು ಸೂಚಿಸಿದೆ.

ದೆಹಲಿಯು 590 ಮೆಟ್ರಿಕ್ ಟನ್ ಆಕ್ಸಿಜನನ್ನು ಪಡೆಯಲೂ ವಿಫಲವಾಗಿದೆ. ಪ್ರತಿದಿನವೂ ಕ್ರೂರ ವಾಸ್ತವದೊಂದಿಗೆ ಮುಖಾಮುಖಿಯಾಗುತ್ತಿರುವ ರಾಷ್ಟ್ರ ರಾಜಧಾನಿಯ ಜನರು, ಐಸಿಯು ಹಾಸಿಗೆಗಳನ್ನು ಮತ್ತು ಆಕ್ಸಿಜನ್ ಹಾಸಿಗೆಗಳನ್ನು ಖಾತರಿಪಡಿಸಿಕೊಳ್ಳುವಲ್ಲಿ ಸೋತು ಹೋಗಿದ್ದಾರೆ. ಒಂದು ಕಡೆಯಿಂದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಇನ್ನೊಂದು ಕಡೆಯಿಂದ ಅಸ್ತಿತ್ವದಲ್ಲಿರುವವುಗಳೂ ಮುರಿದು ಬೀಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದೆ.

ನಾವು ಯಾವ ಕಾರಣವನ್ನೂ ಕೇಳಲು ಸಿದ್ಧವಿಲ್ಲ. ದಿನನಿತ್ಯ ರಾಜಧಾನಿಯ ಜನರಿಗೆ 700 ಮೆಟ್ರಿಕ್ ಟನ್ ಆಮ್ಲಜನಕ ಒದಗಿಸಲೇ ಬೇಕು. ಹಿಂದೆಯೂ ಹೇಳಿದ್ದೇವೆ. ಈಗಲೂ ಅದೇ ಹೇಳುತ್ತಿದ್ದೇವೆ ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ನೇತೃತ್ವದ ನ್ಯಾಯ ಪೀಠವು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು