ಪಾಟ್ನಾ(11/11/2020): ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಮ್ ಆಝಾದ್ ರಿಗೆ ಇಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನಮನಗಳನ್ನು ಅರ್ಪಿಸಿದರು.
ಇಂದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಮೌಲಾನ ಆಝಾದ್ ರ 132ನೇ ಜಯಂತಿಯಾಗಿದ್ದು, ಈ ಪ್ರಯುಕ್ತ ಅವರು ಆಝಾದ್ ರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸ್ಮರಿಸಿದರು.
ದೇಶದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನ ಅಬುಲ್ ಕಲಾಂ ಆಝಾದ್ ರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದೇನೆ’ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಎನ್ ಡಿ ಎ ಕೂಟದ ವಿಜಯೋತ್ಸವದ ನಡುವೆಯೂ ನಿತೀಶ್ ಕುಮಾರ್ ಅಬುಲ್ ಕಲಾಮ್ ಆಝಾದ್ ಅವರನ್ನು ಸ್ಮರಿಸಿದ್ದಾರೆ.