ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್ ಕುಮಾರ್ / ರಾಜ್ಯಪಾಲರಿಂದ ರಾಜೀನಾಮೆ ಅಂಗೀಕಾರ

nithish kumar
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(13/11/2020): ಮೊನ್ನೆ ಪ್ರಕಟಗೊಂಡಿರುವ ಬಿಹಾರದ ಚುನಾವಣಾ ಫಲಿತಾಂಶದಲ್ಲಿ ಎನ್ ಡಿಎ ಬಹುಮತ ಪಡೆದಿರುವುದು ಈಗ ಹಳೆಯ ಸುದ್ದಿ. ಆದರೆ, ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ನೂತನ ಸರ್ಕಾರ ರಚನೆಯಾಗುವವರೆಗೆ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.  ನಿತೀಶ್ ಕುಮಾರ್ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಾಲಿ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯ ಮಾಡಲಾಗಿದೆ.

ಭಾನುವಾರ ನಡೆಯುವ ಎನ್ ಡಿ ಎ ಶಾಸಕರ ಸಭೆಯಲ್ಲಿ  ನಿತೀಶ್ ಕುಮಾರ್ ಅವರನ್ನೇ ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗುವುದು ಎಂದು ಎನ್ ಡಿ ಎ ವಕ್ತಾರರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು