ನವದೆಹಲಿ(11-11-2020): ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಜೋಡನೆ ಕಡ್ಡಾಯವಾಗಿದ್ದು, ಮಾ.31, 2021 ರೊಳಗೆ ಎಲ್ಲಾ ಬ್ಯಾಂಕ್ ಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡನೆ ಮಾಡಬೇಕೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, 2021 ರ ಮಾ.31 ರೊಳಗೆ ಎಲ್ಲ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಇದು ಪ್ರತಿ ಬ್ಯಾಂಕ್ ಗಳ ಜವಾಬ್ಧಾರಿಯಾಗಿದೆ. ಅವಶ್ಯಕತೆ ಇದ್ದರೆ ಖಾತೆಗಳಿಗೆ ಪಾನ್ ನಂಬರ್ ಕೂಡ ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ.
ಈ ಮೊದಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆದಿತ್ತು. ಇದೀಗ ಮತ್ತೆ ನಿರ್ಮಲಾ ಸೀತಾರಾಮನ್ ಸೂಚನೆಯನ್ನು ನೀಡಿದ್ದಾರೆ.