ಮುಂಬೈ(26-02-2021): ಪಿಎನ್ಬಿ ಬ್ಯಾಂಕ್ ಗೆ 13,500 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಬ್ರಿಟನ್ ಕೋರ್ಟ್ ಸಮ್ಮತ ನೀಡಿರುವ ಬೆನ್ನಲ್ಲೇ ನೀರವ್ ಮೋದಿಗಾಗಿ ಮುಂಬೈ ಜೈಲಿನಲ್ಲಿ ವಿಶೇಷ ಕೊಠಡಿ ಸಿದ್ದವಾಗಿದೆ.
ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ನೀರವ್ ಮೋದಿಗೆ ವಿಶೇಷ ಕೊಠಡಿಯನ್ನು ಸಿದ್ಧಪಡಿಸಲಾಗಿದೆ. ನೀರವ್ ಮೋದಿಯನ್ನು ಜೈಲಿನಲ್ಲಿರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಜೈಲಿನ ಬ್ಯಾರಕ್ ಸಂಖ್ಯೆ 12ರ ಮೂರು ಕೊಠಡಿಗಳ ಪೈಕಿ ಒಂದರಲ್ಲಿ ಇರಿಸಲಾಗುವುದು. ಇದು ಅತಿ ಹೆಚ್ಚು ಭದ್ರತೆ ಹೊಂದಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.