ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿ ಮಹಿಳೆ ಮತ್ತು ಮಕ್ಕಳನ್ನು ಕೊಂದು ಹಾಕಿದ ಇಸ್ರೇಲ್ | ಫೆಲೆಸ್ತೀನಿನಲ್ಲಿರುವ ಅಲ್ ಜಝೀರ ಒಳಗೊಂಡ ಅಂತರಾಷ್ಟ್ರೀಯ ಮಾಧ್ಯಮಗಳ ಕಛೇರಿಗಳಿರುವ ಕಟ್ಟಡವೂ ನೆಲಸಮ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜೆರುಸೆಲೆಮ್: ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲಿನ ವೈಮಾನಿಕ ದಾಳಿಯು ಸತತ ಆರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ನಿರಾಶ್ರಿತ ಶಿಬಿರವೊಂದನ್ನು ಗುರಿಯಾಗಿಸಿದೆ. ದಾಳಿಯಲ್ಲಿ ಎಂಟು ಮಕ್ಕಳು ಮತ್ತು ಇಬ್ಬರು ಮಹಿಳೆಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಜಾಗತಿಕವಾಗಿ ಜನಪ್ರಿಯ ಮತ್ತು ಪ್ರಭಾವಶಾಲಿ ಮಾಧ್ಯಮ ಸಂಸ್ಥೆಗಳಲ್ಲೊಂದಾಗಿರುವ ಅಲ್ ಜಝೀರ ಸುದ್ಧಿ ಸಂಸ್ಥೆ, ಮತ್ತಿತರ ಅಂತರಾಷ್ಟ್ರೀಯ ಮಾಧ್ಯಮಗಳ ಕಛೇರಿಗಳಿರುವ ಎತ್ತರದ ಕಟ್ಟಡವನ್ನೂ ಇಸ್ರೇಲ್ ಬಾಂಬ್ ಸುರಿಸಿ ನೆಲಸಮ ಮಾಡಿದೆ.

ಇನ್ನೊಂದು ಗಂಟೆಯೊಳಗೆ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕಛೇರಿಗಳಿರುವ ಕಟ್ಟಡವನ್ನು ಧ್ವಂಸಗೊಳಿಸಲಿರುವೆನು ಎಂದು ಎಚ್ಚರಿಕೆ ನೀಡಿದ ಕೆಲವೇ ಸಮಯದಲ್ಲಿ ಇಸ್ರೇಲ್ ಕಾರ್ಯಾಚರಣೆ ನಡೆಸಿದೆ.

ಇಸ್ರೇಲ್ ಫೆಲೆಸ್ತೀನಿಯರ ಮೇಲೆ ಎಸಗುತ್ತಿರುವ ಯುದ್ಧಾಪರಾಧವನ್ನು ಜಗತ್ತಿನ ಮುಂದಿಡುವಲ್ಲಿ ಜಾಗತಿಕ ಮಾಧ್ಯಮ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿದ್ದವು. ಇದರಲ್ಲಿ ಅಲ್ ಜಝೀರ ಎಲ್ಕಕ್ಕಿಂತ ಮುಂದಿದ್ದು, ಅದರ ವರದಿಗಾರರು ಯುದ್ಧದ ಕ್ಷಣಕ್ಷಣದ ಮಾಹಿತಿಯನ್ನು ನೀಡುತ್ತಿದ್ದರು.

ಅಲ್ ಜಝೀರಾ ಸುದ್ಧಿ ಸಂಸ್ಥೆಯು ಇಸ್ರೇಲಿನ ಕೆಂಗಣ್ಣಿಗೆ ಗುರಿಯಾಗಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಈ ಮೊದಲೂ ಇಸ್ರೇಲ್ ಮಾಡಿದ ದಾಳಿಯ ವಾರ್ತೆಗಳನ್ನೂ, ಹೆಣೆದ ಸಂಚುಗಳ ಬಗೆಗಿನ ಹಲವು ತನಿಖಾ ವರದಿಗಳನ್ನೂ ತಯಾರಿಸಿತ್ತು.

ವರೆಗಿನ ಇಸ್ರೇಲ್ ದಾಳಿಯಲ್ಲಿ ಒಟ್ಟು 140 ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಜೀವ ಕಳೆದುಕೊಂಡಿದ್ದು, ಅದರಲ್ಲಿ 39 ಮುಕ್ಕಳೂ ಸೇರಿದ್ದಾರೆ. ಸಾವಿರದಷ್ಟು ಜನರು ಗಾಯಗೊಂಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಫೆಲೆಸ್ತೀನಿಯನ್ ಪ್ರಜೆಗಳು ತಮ್ಮ ಮನೆಮಠಗಳನ್ನು ತೊರೆದು ದೂರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ದಾಳಿ ಇನ್ನೂ ಮುಂದುವರಿಯುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು