ನಾವು ಹೇಳಿದರೆ ‘ರಾಜಕೀಯ’ ಎಂದಿರಿ, ಈಗ ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ! : ರಾಜ್ಯ ಕಾಂಗ್ರೆಸ್ ಟಾಂಗ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೊರೊನಾ ಎರಡನೇ ಅಲೆ ವಿಪರೀತವಾಗಲು ಜನರು ಹಾಗೂ ಸರ್ಕಾರವೇ ಕಾರಣ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೊಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಜ್ಯ ಕಾಂಗ್ರೆಸ್ ‘ನಾವು ಹೇಳಿದರೆ ‘ರಾಜಕೀಯ’ ಎಂದಿರಿ, ರಾಹುಲ್ ಗಾಂಧಿ ಅವರ ಎಚ್ಚರಿಕೆಯನ್ನು ಕಡೆಗಣಿಸಿ ಟೀಕಿಸಿದಿರಿ, ಈಗ ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ! ಸ್ವೀಕರಿಸಿ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

ಕೋವಿಡ್ ಮೊದಲ ಅಲೆಯ ನಂತರ ರಾಷ್ಟ್ರದ ಎಲ್ಲಾ ವರ್ಗದವರು ತೋರಿಸಿರುವ ನಿರ್ಲಕ್ಷ್ಯವು ದೇಶಾದ್ಯಂತ ಈಗ ತಲೆದೋರಿರುವ ವೈದ್ಯಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಕೊರೊನಾ ಅಲೆಯ ನಂತರ ನಾವೆಲ್ಲರೂ ನಿರ್ಲಕ್ಷ್ಯ ವಹಿಸಿದ್ದೇವೆ. ಜನರು, ಸರಕಾರಗಳು, ಆಡಳಿತ ನಿರ್ಲಕ್ಷ್ಯ ತೋರಿದವು ಎಂದು ಮೋಹನ್ ಭಾಗವತ್ ನಿನ್ನೆ ಹೇಳಿದರು.

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಬಿಜೆಪಿಯನ್ನು ಕುಟುಕಿದೆ, ಕೊರೊನಾವನ್ನು ನಿರ್ಲಕ್ಷ್ಯ ವಹಿಸಿದ್ದಿರಿ ಎಂದು ನಾವು ಹೇಳಿದರೆ ‘ರಾಜಕೀಯ’ ಎಂದಿರಿ, ರಾಹುಲ್ ಗಾಂಧಿ ಅವರ ಎಚ್ಚರಿಕೆಯನ್ನು ಕಡೆಗಣಿಸಿ ಟೀಕಿಸಿದಿರಿ, ಈಗ ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ! ಇನ್ನಾದರೂ ‘ಇಮೇಜ್ ಬಿಲ್ಡಿಂಗ್’ ಬಿಟ್ಟು ವಾಸ್ತವ ಅರಿತು ಕೆಲಸ ಮಾಡಿ, ದೇಶದ ಆರ್ಥಿಕ ಸಂಪನ್ಮೂಲ ಕಳೆದಾಗಿದೆ, ಮಾನವ ಸಂಪನ್ಮೂಲವನ್ನಾದರೂ ಕಾಪಾಡಿ ಎಂದು ಕಾಂಗ್ರೆಸ್ ಬಿಜೆಪಿಯನ್ನು ಕಾಲೆಳೆದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು