ಯುಪಿಯಲ್ಲಿ ಮತಾಂತರದ ವಿರುದ್ಧದ ಕಾಯ್ದೆಯಡಿ ಮೊದಲ ಅರೆಸ್ಟ್

arrest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರಪ್ರದೇಶ(03-12-2020): ಮತಾಂತರದ ವಿರುದ್ಧ ಹೊಸದಾಗಿ ಜಾರಿಗೆ ತಂದ ಕಾನೂನಿನಡಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಮೊದಲ ಬಂಧನ ಮಾಡಿದೆ.

ಹಿಂದೂ ಬಾಲಕಿಯನ್ನು ಇಸ್ಲಾಂಗೆ ಮತಾಂತರಗೊಳಿಸಲು ಒತ್ತಾಯಿಸಿದ್ದಕ್ಕಾಗಿ 21 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಬರೇಲಿಯಲ್ಲಿ ಬಂಧಿಸಲಾಗಿದೆ.

ಲವ್ ಜಿಹಾದ್ ವಿರುದ್ಧ ಯುಪಿ ಪೊಲೀಸರು ಮೊದಲ ಪ್ರಕರಣ ದಾಖಲಿಸಿದ ಐದು ದಿನಗಳ ನಂತರ ಈ ಬಂಧನವಾಗಿದೆ.

ಪೊಲೀಸ್ ವರದಿಗಳ ಪ್ರಕಾರ, ಓವೈಸ್ ಎಂದು ಗುರುತಿಸಲ್ಪಟ್ಟ ಆರೋಪಿ ಬಾಲಕಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅವನು ಯುವತಿಯನ್ನು ಮದುವೆಯಾಗಲು ಮತ್ತು ಧರ್ಮವನ್ನು ಬದಲಾಯಿಸುವಂತೆ ಒತ್ತಡ ಹೇರಿದ್ದಾನೆಂದು ದೂರು ದಾಖಲಿಸಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು