ಒಮೈಕ್ರಾನ್ ಆತಂಕ: ರಾಜಧಾನಿಯಲ್ಲಿ ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ನಿಷೇಧ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳ ಮತ್ತು ಒಮೈಕ್ರಾನ್‌ ರೂಪಾಂತರದ ಆತಂಕದಿಂದಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ವು ರಾಜ್ಯದಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಕೂಟ ನಡೆಯದಂತೆ ನೋಡಿಕೊಳ್ಳಲು ಬುಧವಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಜೊತೆಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಮುಂಚಿತವಾಗಿ ಸಂಭಾವ್ಯ ಕೊರೊನಾ ಸೂಪರ್‌ಸ್ಪ್ರೆಡರ್ ಪ್ರದೇಶಗಳನ್ನು ಗುರುತಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ (DMs) ಆದೇಶಿಸಿದೆ. ಜನರು ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸುವುದನ್ನು ಮತ್ತು ಮಾಸ್ಕ್‌ಗಳನ್ನು ಧರಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಉಪ ಕಮಿಷನರ್‌ಗಳಿಗೆ (ಡಿಸಿಪಿಗಳು) ಪ್ರಾಧಿಕಾರವು ನಿರ್ದೇಶನ ನೀಡಿದೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು