ಕತರ್: ಹೊಸ ಉದ್ಯೋಗ ವೀಸಾಗೆ ಅರ್ಜಿ ಸಲ್ಲಿಸಲು ಅನುಮತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ-ಕತರ್(12-11-2020): ಹೊಸ ಉದ್ಯೋಗ ವೀಸಾದಡಿ ವಿದೇಶಿಯರನ್ನು ತರುವುದಕ್ಕಾಗಿ ಅರ್ಜಿ ಸಲ್ಲಿಸಲು ಕತರ್ ಅನುಮತಿ ನೀಡಿದೆ. ಆದರೆ ಇದು ಕಂಪೆನಿಗಳಿಗೆ ಮಾತ್ರವೇ ಅನ್ವಯವಾಗುವುದು.

ಕತರಿನಲ್ಲಿ ಕೊರೋನಾ ರೋಗವು ಧೃಡಪಟ್ಟ ಮಾರ್ಚ್ ತಿಂಗಳ ಬಳಿಕ ವೀಸಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಎಂಟು ತಿಂಗಳಿನಿಂದ ಯಾವನೇ ಒಬ್ಬ ವಿದೇಶೀಯೂ ಹೊಸ ಉದ್ಯೋಗ ವೀಸಾ ಮೂಲಕ ಕತರಿಗೆ ಬಂದಿರಲಿಲ್ಲ.

ಇದೀಗ ಹೊಸ ವರ್ಕಿಂಗ್ ವೀಸಾಗಳಿಗಾಗಿ ನಾಡಿದ್ದು ಆದಿತ್ಯವಾರದಿಂದ ಕಂಪೆನಿಗಳು ಅರ್ಜಿ ಸಲ್ಲಿಸಬಹುದು ಎಂದು ಕಾರ್ಮಿಕ ಸಚಿವಾಲಯವು ಪ್ರಕಟಿಸಿದೆ. ಜೊತೆಗೆ ಹೀಗೆ ಬರುವವರು ಕತರ್ ಸರಕಾರ ಸೂಚಿಸಿದ ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬುದನ್ನೂ ನೆನಪಿಸಿದೆ.

ವೀಸಾ ಪ್ರಕ್ರಿಯೆಗಳು ಪೂರ್ಣಗೊಂಡು, ಹೊಸ ವೀಸಾ ಮೂಲಕ ಕತರಿಗೆ ಹೊರಡಲನುವಾದ ಹಲವು ವಿದೇಶೀಯರಿಗೆ ಕೊರೋನಾ ಲಾಕ್‌ಡೌನ್ ಕಾರಣದಿಂದ ಕತರಿಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಕಾರ್ಮಿಕ ಸಚಿವಾಲಯದ ಹೊಸ ಪ್ರಕಟಣೆಯು ಇಂತಹ ಹಲವು ಅನಿವಾಸಿಗಳಿಗೆ ಸಂತಸ ತಂದಿದೆ. ಆದರೆ, ಯಾವೆಲ್ಲಾ ದೇಶಗಳಿಗೆ ಇದು ಅನ್ವಯವಾಗುತ್ತೆ? ಭಾರತವೂ ಅದರಲ್ಲಿ ಒಳಗೊಳ್ಳುತ್ತೋ ಮತ್ತು ಯಾವುದೆಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಅನುಮತಿ ಸಿಗುತ್ತೆ ಎಂಬಿತ್ಯಾದಿ ವಿಚಾರಗಳನ್ನು ಸಚಿವಾಲಯವು ಇನ್ನೂ ಸ್ಪಷ್ಟ ಪಡಿಸಿಲ್ಲ. ಅತಿ ಶೀಘ್ರದಲ್ಲೇ ಅದನ್ನೂ ಪ್ರಕಟಿಸಲಿದೆಯೆಂಬ ನಿರೀಕ್ಷೆ ವ್ಯಕ್ತವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು