ಸರಕಾರದ ವಿರುದ್ಧ ಪೋಸ್ಟ್ ಹಾಕಿದ್ರೆ ಜೈಲು! ನೂತನ ಕಾನೂನು ಜಾರಿಗೆ ಮುಂದಾದ ಸರಕಾರ!

up police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಿಹಾರ(22-01-2021): ಸರ್ಕಾರದ ವಿರುದ್ಧ ಪೋಸ್ಟ್​ಗಳನ್ನು ಹಾಕುವವರ ಮೇಲೆ ಕ್ರಮ ಕೈಗೊಳ್ಳಲು ಬಿಹಾರ ಸರಕಾರ ಮುಂದಾಗಿದೆ. ಈ ಮೂಲಕ ಜನರ ವಾಕ್ ಸ್ವಾತಂತ್ರ್ಯದ ಮೇಲೆ ಬಲವಾದ ದಾಳಿಗೆ ಸರಕಾರ ಸಜ್ಜಾಗಿದೆ.

ಬಿಹಾರದ ಸೈಬರ್​ ಕ್ರೈಂ ವಿಭಾಗ ನೂತನ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಈ ಕುರಿತು ಆರ್ಥಿಕ ಅಪರಾಧ ವಿಭಾಗದ ಮುಖ್ಯಸ್ಥರಾದ ಐ.ಜಿ. ನಯ್ಯರ್​ ಹಸ್​ನೈನ್​ ಖಾನ್​​ ಬಿಹಾರ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರಮಣಕಾರಿ ಟೀಕೆ ಮಾಡುವುದು ಕಂಡು ಬಂದಿದೆ. ಇಂತಹ ಕೃತ್ಯಗಳನ್ನು ಸೈಬರ್​ ಅಪರಾಧ ಎಂದು ಪರಿಗಣಿಸಬೇಕು ಎಂದು ಸೂಚನೆ ನೀಡಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು