ಮಂಗಳೂರು : ನದಿಗೆ ಕಸ ಎಸೆಯುವ ವೈರಲ್ ವೀಡಿಯೋದಲ್ಲಿದ್ದವರ ಮೇಲೆ ಪ್ರಕರಣ ದಾಖಲು ; ಕಾರು ವಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉಳ್ಳಾಲ: ನೇತ್ರಾವತಿ ನದಿಗೆ ಕಸ ಎಸೆಯುವ ವೈರಲ್ ವೀಡಿಯೋದಲ್ಲಿದ್ದವರ ಮೇಲೆ ಕೇಸು ದಾಖಲಿಸಲಾಗಿದ್ದು, ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ನೇತ್ರಾವತಿ ನದಿಗೆ ಕಸ ಎಸೆಯುವುದಕ್ಕೆ ನಿಷೇಧವಿದೆ. ಯಾರೂ ಕಸ ಎಸೆಯದಂತೆ ಎತ್ತರದ ಲೋಹದ ಬಲೆಯನ್ನೂ ಕಟ್ಟಲಾಗಿದೆ. ಆದರೆ ಮೇ ಒಂದರಂದು ಇಬ್ಬರು ಮಹಿಳೆಯರು ಕಾರಿನಿಂದಳಿದು  ಬಲೆಯ ಮೇಲಿನಿಂದ ನದಿಗೆ ಕಸ ಎಸೆಯುತ್ತಿದ್ದರು. ಅದು ಹಿಂಬದಿಯ ವಾಹನದ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವೀಡಿಯೋ ತುಣುಕು ಸೋಷಿಯಲ್ ಮೀಡಿಯಾಗಳಲ್ಲೂ ಹರಿಯಬಿಡಲಾಗಿತ್ತು.

ವೀಡಿಯೋ ವೈರಲ್ ಆಗಿತ್ತಲ್ಲದೇ, ಕಸ ಎಸೆದವರ ವಿರುದ್ಧ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರು ಪೋಲೀಸರಿಗೆ ದೂರನ್ನೂ ಕೊಟ್ಟಿದ್ದರು.

ಕಸ ಎಸೆಯುತ್ತಿದ್ದವರ ಮೇಲೆ ಪ್ರಕರಣದಾಖಲಿಸಿದ ಪೋಲೀಸರು, ಕಾರಿನ ಜಾಡು ಹಿಡಿದು, ಅದನ್ನು ವಶಪಡಿಸಿಕೊಂಡಿದ್ದಾರೆಬೆಂಗಳೂರು ನೋಂದಾಯಿತ ವಾಹನವು ಈಗ ಪೋಲೀಸರ ವಶದಲ್ಲಿದೆ.

ಅಲ್ಲದೇ ವೀಡಿಯೋದಲ್ಲಿದ್ದ ಮಹಿಳೆಯರು ಮಾಸ್ಕನ್ನೂ ಧರಿಸದೇ ಇರುವುದರಿಂದ ವಿಪತ್ತು ನಿರ್ವಹಣಾ ಕಾಯ್ದೆಯನ್ವಯವೂ ಕೇಸು ದಾಖಲಿಸುವಂತೆ ಪೋಲೀಸರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು