ನೇರಳಕಟ್ಟೆಯಲ್ಲಿ ‘ನೇತಾಜಿ ಟ್ರೋಪಿ 2021’ ವಾಲಿಬಾಲ್ ಪಂದ್ಯಾಟ

vollyball
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಟ್ಲ(15-02-2021): ನೇರಳಕಟ್ಟೆ ನೇತಾಜಿ ನಗರದ ನೇತಾಜಿ ಗೆಳೆಯರ ಬಳಗದ ವತಿಯಿಂದ ‘ನೇತಾಜಿ ಟ್ರೋಪಿ 2021’ ವಾಲಿಬಾಲ್ ಪಂದ್ಯಾಟವು ನೇರಳಕಟ್ಟೆ ರೈಲ್ವೆ ನಿಲ್ದಾಣದ ಬಳಿ ಭಾನುವಾರ ನಡೆಯಿತು.

ಪಂದ್ಯಾಟವನ್ನು ನೇರಳಕಟ್ಟೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ವಿಠಲ ನಾಯ್ಕ ಉದ್ಘಾಟಿಸಿದರು, ನೇರಳಕಟ್ಟೆ ಸಿ.ಎ.ಬೇಂಕ್ ಉಪಾದ್ಯಕ್ಷ ಡಿ.ತನಿಯಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.  ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಶೋಕ್ ರೈ, ಧನುಂಜಯ ಗೌಡ, ಲತೀಫ್ ನೇರಳಕಟ್ಟೆ, ನಿವೃತ್ತ ಸೈನಿಕ ನಿತೀಶ್, ನೇರಳಕಟ್ಟೆ ಶಾಲಾ ಶತಮಾನೋತ್ಸವ ಸಮಿತಿ ಅದ್ಯಕ್ಷ ನಿರಂಜನ್ ರೈ, ಉದ್ಯಮಿಗಳಾದ ಗಣೇಶ್ ಪುಣೆ, ಕೇಶವದಾಸ್ ಕುಂಪಲ, ಮಿಥುನ್ ರೈ ಕೊಡಂಗೆಮಾರು, ಶಶಿಧರ ಶೆಟ್ಟಿ ಕಲ್ಪಾಡಿಗದ್ದೆ,ರಮ್ಲ ಕಲ್ಪಾಡಿಗದ್ದೆ, ವಿಶುಕುಮಾರ್ ವೈ.ಸಿ.ಜಿ, ಶೀತಲ್ ವೈ.ಸಿ.ಜಿ, ಉರ್ದಿಲ ನವಯುಗ ಜನಸ್ನೇಹಿ ಅದ್ಯಕ್ಷ ಸುಜಿತ್, ಪೆರಾಜೆ ವಿಷ್ಣುಮೂರ್ತಿ ಗೆಳೆಯರ ಬಳಗದ ಅದ್ಯಕ್ಷ ಸುನಿಲ್ ನೇರಳಕಟ್ಟೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಜಿ.ಕೃಷ್ಣಪ್ಪ ನಾಯ್ಕ್, ಪ್ರಮುಖರಾದ ಬಾಲಕೃಷ್ಣ ಗೌಡ ಮಾಯಿಲಗುಡ್ಡೆ, ಕೇಶವ ಗೌಡ ಕುಡೋಲ್, ರಕ್ಷಿತ್ ಶೆಟ್ಟಿ ಮುಂಬೈ, ಹರೀಶ್ ಆಳ್ವ ಮಾದೇಲು, ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಶೋಕ್, ಗೆಳೆಯರ ಬಳಗದ ಕೋಶಾಧಿಕಾರಿ ಅಕ್ಷತ್ ನಾಯ್ಕ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗೆಳೆಯರ ಬಳಗದ ಅಧ್ಯಕ್ಷ ವಸಂತ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಎಂ.ವಂದಿಸಿದರು. ನೇರಳಕಟ್ಟೆ ಶಾಲಾ ಶತಮಾನೋತ್ಸವ ಸಮಿತಿ ಹಾಗೂ ಹಿರಿಯ ವಿದ್ಯರ್ಥಿ ಸಂಘದ ಕ್ರೀಡಾ ಕಾರ್ಯದರ್ಶಿ ಬೇಬಿ ನಾಯ್ಕ್ ನಿರೂಪಿಸಿದರು.     ನೇರಳಕಟ್ಟೆ ಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ಚಂದ್ರಶೇಖರ ಪೆರಾಜೆ, ರಫೀಕ್ ಆತೂರು, ಗೌರೀಶ್ ಗಣೇಶನಗರ ತೀರ್ಪುಗಾರರಾಗಿ ಸಹಕರಿಸಿದರು.

ನೇತಾಜಿ ತಂಡಕ್ಕೆ ಪ್ರಶಸ್ತಿ

ವಾಲಿಬಾಲ್ ಪಂದ್ಯಾಟದಲ್ಲಿ ನೇತಾಜಿ ಗೆಳೆಯರ ಬಳಗ ಪ್ರಥಮ, ಉದಯ ಯುವಕ ಮಂಡಲ ಸೇರಾ ತಂಡ ದ್ವಿತೀಯ, ಸತ್ಯಶ್ರೀ ಅಡ್ಲಬೆಟ್ಟು ತೃತೀಯ ಹಾಗೂ ಸತ್ಯದೇವತಾ ಬೊಳ್ಳಾರು ತಂಡವು ಚತುರ್ಥ ಸ್ಟಾನವನ್ನು ಪಡೆದುಕೊಂಡಿತು.                ನೇತಾಜಿ ತಂಡದ ರೋಶನ್ ಶೆಟ್ಟಿ ಕೊಡಂಗೆಮಾರು ಸವ್ಯಸಾಚಿ ಆಟಗಾರ, ರಿತೇಶ್ ಉತ್ತಮ ಎತ್ತುಗಾರ ಹಾಗೂ ಸೇರಾ ತಂಡದ ಕಿರಣ್ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು