ಇಸ್ರೇಲ್: ತೀವ್ರ ಬಲಪಂಥೀಯತೆಯ ನೇತೃತ್ವದಲ್ಲಿ ನೆತನ್ಯಾಹು ಅಧಿಕಾರಕ್ಕೆ ಕುತ್ತು | ಅರಬ್ ಪಕ್ಷ ಸೇರಿದಂತೆ ಎಂಟು ಪಕ್ಷಗಳ ನಡುವೆ ಅಧಿಕಾರ ಹಂಚಿಕೆಗೆ ಸಹಮತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜೆರುಸಲೆಮ್: ನೆತನ್ಯಾಹು ಆಳ್ವಿಕೆಯ ಪತನಕ್ಕೆ ಕ್ಣಗಣನೆ ಆರಂಭವಾಗಿದ್ದು, ಪ್ರತಿಪಕ್ಷಗಳ ನಡುವೆ ಹೊಂದಾಣಿಕೆ ಮೂಡಿದೆ.

ನೂತನ ಪ್ರಧಾನ ಮಂತ್ರಿಯಾಗಿ ತೀವ್ರ ಬಲಪಂಥೀಯ ನಾಯಕ ನಫ್ತಾಲಿ ಬೆನ್ನೆಟ್ ಮುಂದಿನ ಪ್ರಧಾನ ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಎಂಟು ಪ್ರತಿಪಕ್ಷಗಳು ಒಂದುಗೂಡಿದ್ದು, ಅಧಿಕಾರ ಹಂಚಿಕೆಗೆ ಒಪ್ಪಿಕೊಂಡಿದೆ.

ನೂತನ ಮೈತ್ರಿಕೂಟದಲ್ಲಿ ಅರಬ್ ಪಕ್ಷವಾದರ‍ಆಮ್ಪಕ್ಷವೂ ಸೇರಿದೆ ಎನ್ನುವುದು ವಿಶೇಷ. ಅರಬ್ ಪಕ್ಷವೊಂದು ಆಡಳಿತದ ಭಾಗವಾಗಿ ಮೂಡಿ ಬರುವುದು ಇಸ್ರೇಲ್ ಇತಿಹಾಸದಲ್ಲೇ ಮೊದಲು.

‘ಯೇಶ್ ಅಟಿಡ್’ ಪಕ್ಷದ ಮುಖ್ಯಸ್ಥ ಯಾಇರ್ ಲ್ಯಾಪಿಡ್ ನೇತೃತ್ವದಲ್ಲಿ ಹೊಂದಾಣಿಕೆ ಚರ್ಚೆಗಳು ನಡೆದು ಯಶಸ್ವಿಯಾಗಿದೆ. ಒಂದನೇ ಅವಧಿಗೆ ನಫ್ತಾಲಿ ಬೆನ್ನೆಟ್ ಪ್ರಧಾನ ಮಂತ್ರಿಯಾದರೆ, ಎರಡನೇ ಅವಧಿಗೆ ಯಾಇರ್ ಲ್ಯಾಪಿಡ್ ಅಧಿಕಾರಕ್ಕೇರಲಿದ್ದಾರೆ.

ಮೊದಲ ಎರಡು ವರ್ಷಕ್ಕೆ ಪ್ರಧಾನಿಯಾಗಲಿರುವ ನಫ್ತಾಲಿ ಬೆನ್ನಿಟ್ ತೀವ್ರ ಬಲಪಂಥೀಯ ಪಕ್ಷವಾದನ್ಯೂ ರೈಟ್ಪಕ್ಷದ ಮುಖ್ಯಸ್ಥರಾಗಿದ್ದು, ಮೊದಲು ವಲಸೆ ವ್ಯವಹಾರಗಳ ಸಚಿವರಾಗಿಯೂ, ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು