ನವದೆಹಲಿ(15-10-2020): ಇಂಟರ್ನೆಟ್ ಜಗತ್ತಿನ ಒಂದು ಕಾಲದ ದಿಗ್ಗಜ ಯಾಹೂ ತನ್ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲಿದೆ! ಹತ್ತೊಂಭತ್ತು ವರ್ಷಗಳ ಮೊದಲು ಜನಿಸಿದ ಅಮೆರಿಕಾದ ವೆಬ್ ಸರ್ವಿಸ್ ಕಂಪೆನಿಯಾದ ಯಾಹೂ ಈ ವರ್ಷ ಡಿಸೆಂಬರ್ ತಿಂಗಳ ಹದಿನೈದರಂದು ಮುಚ್ಚಿ ಹೋಗಲಿದೆ.
ಯಾಹೂ ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಮೆಸೇಜ್ ವಿನಿಮಯ ಮಾಡುವ ತಾಣವಾಗಿತ್ತು. 2017ರಲ್ಲಿ ವೆರಿಝೋನ್ ಎಂಬ ಕಂಪೆನಿಯು 480 ಕೋಟಿ ಡಾಲರಿಗೆ ಇದನ್ನು ಖರೀದಿಸಿತ್ತು. ಇದೀಗ ಬಳಕೆದಾರರ ಕೊರತೆಯಿಂದಾಗಿ ಬಾಗಿಲು ಮುಚ್ಚಲಿದೆ.
ಯಾಹೂ ವೆಬ್ಸೈಟ್ ಕೂಡಾ ಅಲಭ್ಯವಾಗಲಿದೆ. ಡಿಸೆಂಬರ್ ಹದಿನೈದರಿಂದ ಯಾಹೂವಿನಲ್ಲಿ ಗ್ರೂಪುಗಳನ್ನು ಮಾಡಲು, ಗ್ರೂಪುಗಳಿಂದ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಕಳುಹಿಸಿದ ಮತ್ತು ಸ್ವೀಕರಿಸಿದ ಇಮೇಲುಗಳನ್ನು ಡಿಲೀಟ್ ಮಾಡಲೂ ಸಾಧ್ಯವಾಗುವುದಿಲ್ಲ. ಗ್ರೂಪ್ ಸದಸ್ಯರ ಹೆಸರುಗಳು ಮತ್ತು ಅವರ ಇಮೇಲ್ ಅಡ್ರೆಸ್ ಇತ್ಯಾದಿಗಳನ್ನು ಡೌನ್ಲೋಡ್ ಮಾಡಲು ಗ್ರೂಪ್ ಅಡ್ಮಿನುಗಳಿಗಷ್ಟೇ ಸಾಧ್ಯವಾಗಲಿದೆ.
ಉದ್ಯಮದ ಬೇರೆ ಕ್ಷೇತ್ರಗಳಲ್ಲಿ ಗಮನ ಕೇಂದ್ರೀಕರಿಸಲು ಉದ್ಧೇಶಿಸಿರುವುದರಿಂದ ಯಾಹೂವನ್ನು ಮುಚ್ಚಲಿದ್ದೇವೆಯೆಂದು ಕಂಪನಿಯು ಹೇಳಿಕೊಂಡಿದೆ. ಗೂಗಲ್, ಫೇಸ್ಬುಕ್ ಇತ್ಯಾದಿ ಬೃಹತ್ ಸಂಸ್ಥೆಗಳ ಜೊತೆಗೆ ಪೈಪೋಟಿ ನೀಡಲು ಸಾಧ್ಯವಾದಿರುವುದು ಇದರ ಮುಚ್ಚುಗಡೆಗೆ ಕಾರಣವಾಗಿದೆ.