ಮ್ಯಾಗಿ, ಕಿಟ್‍ಕ್ಯಾಟ್, ನೆಸ್ಕೆಫೆ ಸೇರಿದಂತೆ ತನ್ನ ಎಪ್ಪತ್ತು ಶೇಕಡಾ ಆಹಾರ ಉತ್ಪನ್ನಗಳು ಅನಾರೋಗ್ಯಕರ! ಸ್ವತಃ ಒಪ್ಪಿಕೊಂಡ ನೆಸ್ಲೆ ( Nestle) ಕಂಪೆನಿ…

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆರ್ನ್: ಮ್ಯಾಗಿ, ಕಿಟ್‍ಕ್ಯಾಟ್, ನೆಸ್ಕೆಫೆ ಸೇರಿದಂತೆ ತನ್ನ ಎಪ್ಪತ್ತು ಶೇಕಡಾ ಆಹಾರ ಉತ್ಪನ್ನಗಳು ಅನಾರೋಗ್ಯಕರ ಎಂಬುದನ್ನು ಸ್ವತಃ ನೆಸ್ಲೆ (Nestle) ಕಂಪೆನಿಯೇ ಒಪ್ಪಿಕೊಂಡಿದೆ!

ವಿಶ್ವದ ಅತಿದೊಡ್ಡ ಆಹಾರೋತ್ಪನ್ನ ಸಂಸ್ಥೆಯಾಗಿರುವ ನೆಸ್ಲೆ ಸಂಸ್ಥೆಯ ಆಂತರಿಕ ವರದಿಯಲ್ಲಿ ಆಘಾತಕಾರಿ ವಿಚಾರವು ಬಹಿರಂಗಗೊಂಡಿದೆ. ಕಂಪೆನಿಯ ಉನ್ನತ ಹುದ್ದೆಯಲ್ಲಿರುವವರಿಗೆ ಸಲ್ಲಿಸಲಾದ ವರದಿಯಲ್ಲಿ ಹೇಳಿರುವಂತೆ, ಇಂತಹ ಉತ್ಪನ್ನಗಳನ್ನು ಸೇವಿಸಿದರೆ, ಅನಾರೋಗ್ಯ ಉಂಟಾಗಲಿದೆ. ಬ್ರಿಟನ್ನಿನ ಮಾಧ್ಯಮ ಸಂಸ್ಥೆಫೈನಾನ್ಸಿಯಲ್ ಟೈಮ್ಸ್ ಬಗ್ಗೆ ವರದಿ ಮಾಡಿದೆ.

ಕೆಲವು ಉತ್ಪನ್ನಗಳನ್ನು ಎಷ್ಟು ಪ್ರಯತ್ನಿಸಿದರೂ ಆರೋಗ್ಯಕರವಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡಿರುವ ನೆಸ್ಲೆ ಕಂಪೆನಿಯು, ಮುಂದೆಯೂ ಅವುಗಳ ಗುಣಮಟ್ಟವನ್ನು ಹೆಚ್ಚು ಮಾಡುವ ಪ್ರಯತ್ನವನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ!

ನೆಸ್ಲೆ ತಯಾರಿಸುತ್ತಿರುವ ಚಾಕ್ಲೆಟ್ ಮುಂತಾದ ಉತ್ಪನ್ನಗಳು ಅನಾರೋಗ್ಯಕರ ತಿನಿಸುಗಳಲ್ಲಿ ಸೇರುತ್ತದೆ. ಆದರೆ ಮಕ್ಕಳ ಆಹಾರ, ಸಾಕು ಪ್ರಾಣಿಗಳಿಗೆ ನೀಡಲಾಗುವ ತಿನಿಸು, ವೈದ್ಯಕೀಯ ಉತ್ಪನ್ನ ಇತ್ಯಾದಿಗಳು ಅನಾರೋಗ್ಯಕರ ಉತ್ಪನ್ನಗಳಲ್ಲಿ ಸೇರುವುದಿಲ್ಲವೆಂದೂ ಕಂಪೆನಿ ವರದಿಯಲ್ಲಿ ಹೇಳಲಾಗಿದೆ.

ಆಸ್ಟ್ರೇಲಿಯಾ ಫುಡ್ ರೇಟಿಂಗಿನಲ್ಲಿ ನೆಸ್ಲೆ ಕಂಪೆನಿಯ 37 ಶೇಕಡಾ ಆಹಾರೋತ್ಪನ್ನಗಳು ‘5 ರಲ್ಲಿ 3.5’ ಸ್ಟಾರುಗಳನ್ನು ಪಡೆದಿವೆ. ಅದೇ ವೇಳೆ ನೀರಿನ(ದ್ರವ) ಉತ್ಪನ್ನಗಳಲ್ಲಿ ಸುಮಾರು 87 ಶೇಕಡಾ ಉತ್ಪನ್ನಗಳು ಹಾಗೂ ಹಾಲಿನ ಉತ್ಪನ್ನಗಳಲ್ಲಿ ಸುಮಾರು 60 ಶೇಕಡಾ ಉತ್ಪನ್ನಗಳು 3.5 ಕ್ಕಿಂತ ಹೆಚ್ಚಿನ ರೇಟಿಂಗನ್ನು ಪಡೆದಿವೆ. ಎರಡು ರೀತಿಯ ಉತ್ಪನ್ನಗಳು ಕಂಪೆನಿಯ ಉಳಿದ  ಉತ್ಪನ್ನಗಳಿಗಿಂತ  ತುಸು ಹೆಚ್ಚಿನ ಗುಣಮಟ್ಟವನ್ನು ಹೊಂದಿದೆ.

ಈಗಿರುವ ರುಚಿಯನ್ನು ಕಾಯ್ದುಕೊಂಡೇ ಆಹಾರೋತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ವಿಶೇಷ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿರುವುದಾಗಿ ನೆಸ್ಲೆ ಕಂಪೆನಿಯು ಭರವಸೆ ನೀಡಿದೆ.

ಅಘಾತಕಾರಿ ವರದಿಯ ಹಿನ್ನೆಲೆಯಲ್ಲಿ ನೆಸ್ಲೆ ಕಂಪೆನಿಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅನುಮತಿ ನೀಡಿದ ವಿವಿಧ ದೇಶಗಳ ಸರಕಾರ ಹಾಗೂ ಆಹಾರವನ್ನು ಪರಿಶೀಲಿಸುವ ಸಂಸ್ಥೆಗಳ ದಕ್ಷತೆಯೇ ಅನುಮಾನಕ್ಕೊಳಗಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು