ನೀಟ್ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ವಿವಾದ| ಫಲಿತಾಂಶಗಳಲ್ಲಿ ವ್ಯತ್ಯಾಸ, NTA ಮಧ್ಯಪ್ರವೇಶಕ್ಕೆ ಆಗ್ರಹ

neet
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದಹಲಿ(20-10-2020): ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್ 2020) ಫಲಿತಾಂಶಗಳು ಪ್ರಕಟವಾದ ಕೆಲವು ದಿನಗಳ ನಂತರ, ದೇಶಾದ್ಯಂತದ ಹಲವಾರು ಅಭ್ಯರ್ಥಿಗಳು ತಮ್ಮ ಅಂಕಗಳಲ್ಲಿ ಸಂಭವನೀಯ ವ್ಯತ್ಯಾಸವಾಗಿದೆ ಎಂದು ದೂರಿದ್ದು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು (ಎನ್‌ಟಿಎ) ಸಂಪರ್ಕಿಸಿದ್ದಾರೆಂದು ವರದಿಯಾಗಿದೆ. ಆದರೆ ಅವರಿಗೆ ಯಾವುದೇ ಬೆಂಬಲ ದೊರೆತಿಲ್ಲ ಎಂದು ಹೇಳುತ್ತಾರೆ.

 ನೀಟ್ 2020 ರ ಫಲಿತಾಂಶಗಳನ್ನು ಅಕ್ಟೋಬರ್ 16 ರಂದು ಘೋಷಿಸಲಾಯಿತು ಮತ್ತು 56.44% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಕ್ಟೋಬರ್ 18 ರಂದು ತಮಿಳುನಾಡಿನ ಕೊಯಮತ್ತೂರು ಮತ್ತು ಅರಿಯಲೂರಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ನಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿದ್ದಾರೆ. ಅವರಲ್ಲಿ ಒಬ್ಬರು ಎನ್‌ಟಿಎಯನ್ನು ಮಧ್ಯಪ್ರವೇಶಿಸಿ ಎಂದು ಸಂಪರ್ಕಿಸಿದ್ದಾರೆ.

ಈ ಕುರಿತು ಮಾದ್ಯಮದ ಜೊತೆ ಮಾತನಾಡಿದ ರಾಜಸ್ಥಾನದ ನೀಟ್ ಆಕಾಂಕ್ಷಿಯ ತಾಯಿ ವಿದ್ಯಾ, ಅವರ ಅಂತಿಮ ಸ್ಕೋರ್ 720 ರಲ್ಲಿ 210 ಬಂದಿದೆ. ಅವರಿಗೆ ಪರೀಕ್ಷೆ ಮುಗಿದ ತಕ್ಷಣ ನಡೆದ ಲೆಕ್ಕಾಚಾರದಂತೆ 504 ಸ್ಕೋರ್ ಸಿಕ್ಕಿತ್ತು. ಆದರೆ ಅದರ ಆಸುಪಾಸಿನಲ್ಲಿ ಆತ ಸ್ಕೋರ್ ಮಾಡುತ್ತಾನೆ ಎಂಬ ನಂಬಿಕೆ ನನಗಿದೆ. ಆದರೆ ಫಲಿತಾಂಶದಲ್ಲಿ ಭಾರೀ ವ್ಯತ್ಯಾಸವಾಗಿದೆ ಎಂದು ಆರೋಪಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು