ಪೊಲೀಸರ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಬ್ದುಲ್ ಸಲಾಮ್ ಕುಟುಂಬ| ಆತ್ಮಹತ್ಯೆ ಮೊದಲು ತಮ್ಮ ನೋವನ್ನು ಹೇಳಿಕೊಂಡ ವಿಡಿಯೋ ವೈರಲ್

Sheik Abdul Salam
Share on facebook
Share on twitter
Share on linkedin
Share on whatsapp
Share on telegram
Share on email
Share on print

ಆಂಧ್ರಪ್ರದೇಶ(09-11-2020): ಪೊಲೀಸರ ದೌರ್ಜನ್ಯಕ್ಕೆ ಬೇಸತ್ತು,  ಆಂಧ್ರಪ್ರದೇಶದ ನಂದ್ಯಾಲ್ ಪಟ್ಟಣದಲ್ಲಿರುವ ಶೇಕ್ ಅಬ್ದುಲ್ ಸಲಾಮ್ ಕುಟುಂಬ ರೈಲ್ವೇ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಇದೀಗ ವೈರಲ್ ವಿಡಿಯೋದಿಂದ ತಿಳಿದು ಬಂದಿದೆ.

ಪೊಲೀಸರು ನನಗೆ ಎರಡು ಅಪರಾಧಗಳಿಗೆ ಸಂಬಂಧಿಸಿದಂತೆ ಕಿರುಕುಳ ನೀಡಿದ್ದಾರೆ. ನನಗೆ ಮತ್ತು ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಮತ್ತು ಪೊಲೀಸರ ಹಿಂಸೆಯನ್ನು ಇನ್ನು ಮುಂದೆ ಸಹಿಸಲು ನಮಗೆ ಸಾಧ್ಯವಿಲ್ಲ ಎಂದು ಕಣ್ಣೀರಿನೊಂದಿಗೆ ಮಾಡಿದ ವಿಡಿಯೋದಲ್ಲಿ ಶೇಕ್ ಅಬ್ದುಲ್ ಸಲಾಮ್ ಕುಟುಂಬ ಹೇಳಿದೆ.

ಕಳೆದ ಬುಧವಾರ ಮಧ್ಯಾಹ್ನದ ಹೊತ್ತಿಗೆ ಕುಟುಂಬದ ನಾಲ್ವರು ಸದಸ್ಯರನ್ನು ಕರ್ನೂಲ್ ಜಿಲ್ಲೆಯ ಸರ್ಕಾರಿ ರೈಲ್ವೆ ಪೊಲೀಸರು ಶವವಾಗಿ ಪತ್ತೆ ಮಾಡಿದ್ದಾರೆ. ಅವರ ಮರಣದ ಕೆಲವು ದಿನಗಳ ನಂತರ ವೀಡಿಯೊ ಹೊರಹೊಮ್ಮುವುದರೊಂದಿಗೆ ಚರ್ಚೆಗೆ ಗ್ರಾಸವಾಗಿದೆ.

ಹಲವಾರು ತಿಂಗಳುಗಳಿಂದ ಅಬ್ದುಲ್ ಸಲಾಂಗೆ ಪದೇ ಪದೇ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಹೆಡ್ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ.

ಅಬ್ದುಲ್ ಸಲಾಮ್ ನಂದ್ಯಾಲ್‌ನ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳ ಹಿಂದೆ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಂಗಡಿಯ ಮಾಲೀಕರು ಅಬ್ದುಲ್ ಸಲಾಮ್ ಚಿನ್ನವನ್ನು ಕದ್ದಿದ್ದಾರೆ ಎಂದು ಶಂಕಿಸಿ ದೂರು ನೀಡಿ ಜೈಲಿಗಟ್ಟಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಸಲಾಂ ಬಾಡಿಗೆ ಆಟೋ ಓಡಿಸಲು ಪ್ರಾರಂಭಿಸಿದ್ದ. ಆದರೆ ಆತನಿಗೆ ಅಂಗಡಿ ಮಾಲೀಕರು ಮತ್ತು ಪೊಲೀಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು