ನ್ಯಾಯಾಲಯದಲ್ಲಿ ಕೇಂದ್ರಕ್ಕೆ ಸರಣಿ ಮುಖಭಂಗವಾಗಿದೆ: ದಿನೇಶ್ ಗುಂಡೂರಾವ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಕೇಂದ್ರ ಸರ್ಕಾರದ ಅಸಮರ್ಪಕ ಲಸಿಕಾ ನೀತಿ ಬಗ್ಗೆ ಸುಪ್ರೀಂ ಕೋರ್ಟ್ ಪದೇ ಪದೇ ಚಾಟಿ ಬೀಸುತ್ತಿದೆ. ಇದು ನ್ಯಾಯಾಲಯದಲ್ಲಿ ಕೇಂದ್ರಕ್ಕೆ ಸರಣಿ ಮುಖಭಂಗವಾಗಿದೆ ಎಂದು ಕೆಪಿಸಿಸಿ ವಕ್ತಾರ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿದ ಅವರು,
ಕಾರ್ಯಾಂಗದ ಅಧಿಕಾರ ವ್ಯಾಪ್ತಿಯಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಬಾರದು ಎಂಬ ಕೇಂದ್ರದ ವಾದ ಉದ್ಧಟತನದ್ದು. ಕೇಂದ್ರದ ಮನೆಹಾಳು ನೀತಿಯಿಂದ ಜನ ಸಾಯುವುದನ್ನು ನೋಡಿಯೂ ಕೋರ್ಟ್ ಮೌನವಾಗಿರಬೇಕೆ? ಎಂದಿದ್ದಾರೆ.

ಕಳೆದ ಬಜೆಟ್‌ನಲ್ಲಿ ಲಸಿಕಾ ಯೋಜನೆಗಾಗಿ ಕೇಂದ್ರ 35 ಸಾವಿರ ಕೋಟಿ ಮೀಸಲಿಟ್ಟಿತ್ತು.
ಆ ಹಣ ಎಲ್ಲಿದೆ? ಅದೇ ಹಣದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಉಚಿತ ಲಸಿಕೆ ನೀಡಬಹುದಲ್ಲವೇ? ಆದರೆ BJP ಯ ಸಂಸದರು & ಶಾಸಕರು ಖಾಸಗಿ ಆಸ್ಪತ್ರೆಯ ರಾಯಭಾರಿಗಳಂತೆ ದುಡ್ಡು ಕೊಟ್ಟು ಲಸಿಕೆ ಪಡೆಯಲು ಪ್ರಚಾರ ಮಾಡುತ್ತಾರೆ. ಇದನ್ನು ಕೋರ್ಟ್ ಪ್ರಶ್ನಿಸಬಾರದೆ? ಎಂದು ಬಿಜೆಪಿ ವಿರುದ್ದ ದೂರಿದ್ದಾರೆ.

ಬಜೆಟ್‌ನಲ್ಲಿ ಲಸಿಕಾ ಯೋಜನೆಗೆ ಮೀಸಲಿಟ್ಟ 35 ಸಾವಿರ ಕೋಟಿಯನ್ನು ಲಸಿಕೆಗೆ ಬಳಸಬೇಕಿರುವುದು ಕೇಂದ್ರದ ಕರ್ತವ್ಯ. ಬಜೆಟ್‌ನಲ್ಲಿ ಹಣ ಮೀಸಲಿಟ್ಟರೂ ಜನ, ಯಾಕೆ ದುಡ್ಡು ಕೊಟ್ಟು ಲಸಿಕೆ ಪಡೆಯಬೇಕು?
ಇನ್ನು ಲಸಿಕೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ದರ ವಿಧಿಸಲಾಗ್ತಿದೆ. ಎಲ್ಲೂ ಏಕರೂಪ ದರವಿಲ್ಲ.
ಇದು ಕೇಂದ್ರದ ಲಸಿಕಾ ನೀತಿಯ ವೈಫಲ್ಯವಲ್ಲವೇ? ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು