ನಾವು ಕರ್ನಾಟಕದ ಜನರನ್ನು ಸಂಕಟಕ್ಕೆ ದೂಡಲು ಬಯಸುವುದಿಲ್ಲ! ಕೇಂದ್ರ ಸರಕಾರದ ಮೇಲ್ಮನವಿಯನ್ನು ವಜಾಗೊಳಿಸಿ, ಸುಪ್ರೀಮ್ ಕೋರ್ಟ್ ಹೇಳಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕರ್ನಾಟಕಕ್ಕೆ ಆಕ್ಸಿಜನ್ ಪೂರೈಸಬೇಕೆಂದು ಕರ್ನಾಟಕ ಹೈಕೋರ್ಟ್, ಕೇಂದ್ರಕ್ಕೆ ನೀಡಿದ್ದ ಆದೇಶವನ್ನು ಸುಪ್ರೀಮ್ ಕೋರ್ಟ್ ಎತ್ತಿ ಹಿಡಿದಿದ್ದು, ಕೇಂದ್ರ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಪೂರೈಸಲಾಗುತ್ತಿರುವ ಆಮ್ಲಜನಕವನ್ನು 965 ಮೆಟ್ರಿಕ್ ಟನ್ನುಗಳಿಂದ 1200 ಮೆಟ್ರಿಕ್ ಟನ್ನುಗಳಿಗೆ ಹೆಚ್ಚಿಸಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.

ಆದರೆ ಹೈಕೋರ್ಟಿನ ಆದೇಶದ ವಿರುದ್ಧ ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನ ಮೆಟ್ಟಿಲೇರಿತ್ತು. ಇದೀಗ ಅಲ್ಲೂ ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ನಾವು ಕರ್ನಾಟಕದ ಜನರನ್ನು ಸಂಕಟಕ್ಕೆ ದೂಡಲು ಬಯಸುವುದಿಲ್ಲ ಎಂದು ಹೇಳಿದ ಸುಪ್ರೀಮ್ ಕೋರ್ಟ್, ಕೇಂದ್ರದ ಮನವಿಯನ್ನು ಸರಾಸಗಟಾಗಿ ತಿರಸ್ಕರಿಸಿದೆ.

ಕರ್ನಾಟಕ ಹೈಕೋರ್ಟ್ ಪರಿಶೀಲನೆ ನಡೆಸಿಯೇ ಈ ಆದೇಶ ಹೊರಡಿಸಿದೆ. ಹಾಗಾಗಿ ನಾವಿದರಲ್ಲಿ ಮಧ್ಯಪ್ರವೇಶ ಮಾಡುತ್ತಿಲ್ಲ. ಕರ್ನಾಟಕ ಹೈಕೋರ್ಟಿನ ಆದೇಶದಂತೆಯೇ 1200 ಟನ್ ಆಮ್ಲಜನಕವನ್ನು ಪೂರೈಸಲೇ ಬೇಕು ಎಂದಿದೆ.

ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಮುಖೇಶ್ ಕುಮಾರ್ ಅವರನ್ನು ಒಳಗೊಂಡಿರುವ ನ್ಯಾಯಪೀಠವು ನಿಲುವನ್ನು ತಾಳಿದೆ.

ಕರ್ನಾಟಕದಾದ್ಯಂತ ಆಮ್ಲಜನಕದ ಕೊರತೆ ಕಂಡು ಬರುತ್ತಿದ್ದು, ಇತ್ತೀಚೆಗಷ್ಟೇ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಕೋವಿಡ್ ರೋಗಿಗಳು ಬಲಿಯಾಗಿದ್ದರು. ಇದು ರಾಷ್ಟ್ರೀಯ ಸುದ್ದಿಯಾಗಿ ಮಾರ್ಪಟ್ಟು, ಕರ್ನಾಟಕದ ಆಕ್ಸಿಜನ್ ಕೊರತೆಯ ಬಗ್ಗೆ ದೇಶದ ಗಮನ ಸೆಳೆಯುವಂತೆ ಮಾಡಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು