ಭುವನೇಶ್ವರ :ಬೀದಿನಾಯಿಯೊಂದು ಆಸ್ಪತ್ರೆ ಒಳನುಗ್ಗಿ ನವಜಾತ ಶಿಶುವಿನ ಕಳೇಬರವನ್ನು ಕೊತ್ತುಕೊಂಡ ದುರಾದೃಷ್ಟಕರ ಘಟನೆಗೆ ಒಡೀಶಾದ ಭದ್ರಾಕ್ ಜಿಲ್ಲೆಯ ಸರಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ.
ನಾಯಿಯ ಬಾಯಿಯಲ್ಲಿ ಮಗುವನ್ನು ನೋಡಿದಾಗ ಮಗು ಜೀವಂತವಾಗಿದೆ ಎಂದು ಭಾವಿಸಿ ನಾಯಿಯನ್ನು ಓಡಿಸಿಕೊಂಡು ಹೋದೆವು. ಆದರೆ ಅದು ಮಗುವಿನ ಶವವಾಗಿತ್ತು. ಆಸ್ಪತ್ರೆಯ ಆವರಣದ ಒಳಗಡೆಯೇ ಇಂತಹ ಘಟನೆ ನಡೆಯುತ್ತಿದ್ದರೆ ನಾವು ಮಕ್ಕಳನ್ನು ಚಿಕಿತ್ಸೆಗೆ ಕರೆದುಕೊಂಡು ಬರುವುದು ಹೇಗೆ ಎಂದು ಜನಸಾಮಾನ್ಯರು ಪ್ರಶ್ನಿಸಿದ್ದಾರೆ.
ಈ ಅವಘಡಕ್ಕೆ ಮುಖ್ಯ ಕಾರಣವೇನು? ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಭದ್ರಕ್ ಜಿಲ್ಲಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.