ಗೋಡ್ಸೆಯನ್ನು ಭಾರತದ “ಶ್ರೇಷ್ಠ ದೇಶಭಕ್ತ” ಎಂದು ಟ್ವೀಟ್ ಮಾಡಿದ ಬಿಜೆಪಿ ನಾಯಕ…ಟೀಕೆ ಬೆನ್ನಲ್ಲೇ ಟ್ವೀಟ್ ಕಾಣೆ!

bjp leader
Share on facebook
Share on twitter
Share on linkedin
Share on whatsapp
Share on telegram
Share on email
Share on print

ಆಂಧ್ರಪ್ರದೇಶ (16-11-2020): ಆಂಧ್ರಪ್ರದೇಶದ ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ನೈಡು ನಾಗೋತು ಅವರು ಅಧಿಕೃತ ಟ್ವೀಟ್ಟರ್ ಖಾತೆಯಲ್ಲಿ ಮಹಾತ್ಮ ಗಾಂಧಿಯವರ ಕೊಲೆಗಾರ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತನೆಂದು ಟ್ವೀಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಟ್ವೀಟನ್ನು ಡಿಲಿಟ್ ಮಾಡಿದ್ದಾರೆ.

ಗಾಡ್ಸೆ ಅವರ ಸಾವಿನ ವರ್ಷಾಚರಣೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ರಮೇಶ್ನೈಡು, ಗೋಡ್ಸೆ ಭಾರತದ “ಶ್ರೇಷ್ಠ ದೇಶಭಕ್ತ” ನಾಥುರಾಮ್_ಗೋಡ್ಸ್ ಅವರನ್ನು ಅತ್ಯಂತ ಕೃತಜ್ಞತೆಯಿಂದ ವಂದಿಸುತ್ತೇನೆ ಎಂದು ಬರೆದಿದ್ದರು.

ಈ ಬಗ್ಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಮೇಶ್ನೈಡು ಟ್ವೀಟ್ ನ್ನು ಅಳಿಸಿಹಾಕಿದರು ಮತ್ತು ಆಕ್ಷೇಪಾರ್ಹ ಪೋಸ್ಟ್ ನ್ನು ಅವರ ಸಾಮಾಜಿಕ ಮಾಧ್ಯಮ ತಂಡ ಬರೆದಿರುವುದು ಎಂದು ಸಮಜಾಯಿಸಿ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು