ನಟ ಶಿವರಾಜ್ ಕುಮಾರ್, ಲೇಖಕಿ ಬಿ.ಟಿ.ಲಲಿತ್ ನಾಯಕ್ ಸೇರಿ ನಾಲ್ಕು ಜನರಿಗೆ ಕೊಲೆ ಬೆದರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮೇ 1ರಂದು ಖ್ಯಾತ ನಟ ಶಿವರಾಜ್ ಕುಮಾರ್, ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್. ರಂಗನಾಥ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ನನಗೆ ಕೊಲೆ ಮಾಡುವುದಾಗಿ ಕರೀಂ ಚಳ್ಳಕೆರೆ ಎನ್ನುವ ವ್ಯಕ್ತಿ ನನಗೆ ಪತ್ರ ಬರೆದಿದ್ದಾನೆ ಎಂದು ಮಾಜಿ ಸಚಿವೆ ಹಾಗೂ ಹಿರಿಯ ಲೇಖಕಿ ಬಿ.ಟಿ. ಲಲಿತ ನಾಯಕ್ ಇಂದು ಹೇಳಿದ್ದಾರೆ. ಈ ಕುರಿತು ಪೊಲೀಸರ ಗಮನಕ್ಕೆ ತಂದಿದ್ದೇನೆ ಅವರು ಭದ್ರತೆ ಒದಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾನುವಾರ ನಡೆದ ಎಚ್.ಎಂ.ರೇವಣ್ಣ ಅವರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ‘ಸಂಗತ’ ಕೃತಿ ಕುರಿತು ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ್ದಾರೆ‌. ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆಗೈದ ಹಾಗೇ ನಿಮ್ಮನ್ನು ಮುಗಿಸುತ್ತೇವೆ ಎಂದು ಹಂತಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ನಮ್ಮ ನಾಲ್ಕು ಜನರಿಗೆ ಪೊಲೀಸರು ಸೂಕ್ತ ರಕ್ಷಣೆ ಒದಗಿಸಬೇಕೆಂದು ಚಿಂತಕಿ ಬಿ.ಟಿ ಲಲಿತ ನಾಯಕ್ ಅವರು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು