ನಾಪೋಕ್ಲು(19-11-2020): ನಗರದ ಬೇತು ರಸ್ತೆಯಲ್ಲಿ ಆಟೋ ರಿಕ್ಷಾ ನಿಲುಗಡೆಗೆ ಈಗಾಗಲೇ ಗ್ರಾಮಪಂಚಾಯತಿ ಹಾಗೂ ನಾಪೋಕ್ಲು ಪೊಲೀಸ್ ಇಲಾಖೆಯ ವತಿಯಿಂದ ಜಾಗವನ್ನು ನಿಗದಿಪಡಿಸಿದ್ದು. ಸುಮಾರು 120 ಮೀಟರ್ ರಸ್ತೆ ಬದಿಯ ಜಾಗವನ್ನು ಆಟೋರಿಕ್ಷಾ ನಿಲುಗಡೆಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ನಿಗದಿಪಡಿಸಿದ ಆಟೋರಿಕ್ಷಾ ನಿಲ್ದಾಣದಲ್ಲಿ ಬೇರೆ ಖಾಸಗಿ ವಾಹನ ನಿಲ್ಲಿಸಬಾರದೆಂದು ನಾಮಫಲಕ ಅಳವಡಿಸಲಾಗಿದ್ದರೂ ಕ್ಯಾರೇ ಅನ್ನದೆ ಆಟೋ ರಿಕ್ಷಾ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸೋದರಿಂದ ಆಟೋ ನಿಲ್ಲಸಲು ತೊಡಕು ಉಂಟಾಗಿದೆ.
ಆಟೋ ರಿಕ್ಷಾ ನಿಲ್ಲಿಸುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಬಾರದೆಂದು ನಾಪೋಕ್ಲು ಠಾಣಾಧಿಕಾರಿ ಆರ್. ಕಿರಣ್ ರವರು ಖಡಕ್ ಎಚ್ಚರಿಕೆ ನೀಡಿದ್ದರು. ಆದರೂ ಖಾಸಗಿ ವಾಹನ ಮಾಲೀಕರು ನೋಪಾರ್ಕಿಂಗ್ ದಿಕ್ಕರಿಸಿ ವಾಹನ ನಿಲ್ಲಿಸುತ್ತಿರೋದು ವಿಪರ್ಯಾಸ. ಇದಕ್ಕೆ ಠಾಣಾಧಿಕಾರಿಗಳೇ ಉತ್ತರನೀಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.