ಯಾದಗಿರಿ(21-10-2020): ಭೀಮಾ ನದಿ ಪ್ರವಾಹದಿಂದ ಸಂಕಷ್ಟಕ್ಕೀಡಗಿರುವ ಶಹಾಪುರ ತಾಲ್ಲೂಕಿನ ರೋಜಾ ಗ್ರಾಮದ ಜನರು ಸ್ನಾನ ಇಲ್ಲ, ನಮಾಜು ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಇವರು ಕಳೆದ 6 ದಿನಗಳಿಂದ ಸಾಂತ್ವಾನ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ರೋಜಾ ಗ್ರಾಮ ಮುಸ್ಲಿಂ ಸಮುದಾಯದವರು ಮಾತ್ರ ನೆಲೆಸಿರುವ ಗ್ರಾಮ. ಭೀಮಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ಪೊಲೀಸರು ನಮ್ಮನ್ನು ಹೊಸುರು ಗ್ರಾಮದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಈ ಗ್ರಾಮದಲ್ಲಿ 120 ಮನೆಗಳಿದ್ದು, 400 ಜನರು ವಾಸಿಸುತ್ತಿದ್ದಾರೆ. ಇವರು ಕೃಷಿಯನ್ನು ಜೀವನಾಧಾರವಾಗಿ ಆಶ್ರಯಿಸಿದ್ದು, ಗ್ರಾಮಕ್ಕೆ ತೆರಳಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಮಾತನಾಡಿದ ಗ್ರಾಮಸ್ಥ ಕರೀಂ ಸಾಬ್, ನಾವು ಹೇಗೋ ಹೊಳಿ ದಂಡಿಗೆ ಹೋಗಿ ಸ್ನಾನ ಮಾಡಿಕೊಂಡು ಬರುಬಹುದು. ಆದರೆ, ಹೆಂಗಸರು ಎಲ್ಲಿಯಂತ ಹೋಗುವುದು. ನಮ್ಮ ಜೀವ ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ ಎಂದು ಹೇಳಿದ್ದಾರೆ.