ನಾಳೆಯಿಂದ ಉಪವಾಸ ಸತ್ಯಾಗ್ರಹ ನಡೆಸಿ ಮುಷ್ಕರವನ್ನು ತೀವ್ರಗೊಳಿಸುವೆವು ಎಂದ ಚಂದ್ರಶೇಖರ್ ಕೋಡಿಹಳ್ಳಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(12-12-2020): ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸದ ಸರಕಾರದ ವಿರುದ್ಧ ಹೂಡಿದ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸುವೆವು ಎಂದು ಚಂದ್ರಶೇಖರ್ ಕೋಡಿಹಳ್ಳಿ ಹೇಳಿದ್ದಾರೆ. ಇದರ ಭಾಗವಾಗಿ ಎಲ್ಲಾ ಡಿಪೋಗಳಲ್ಲಿಯೂ ಉಪವಾಸ ಸತ್ಯಾಗ್ರಹ ನಡೆಸಲಿರುವೆವು ಎಂದೂ ಎಚ್ಚರಿಸಿದ್ದಾರೆ.

ತಮ್ಮನ್ನು ಸರಕಾರಿ ನೌಕರರನ್ನಾಗಿ ಮಾನ್ಯ ಮಾಡುವುದು ಸೇರಿ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಸಾರಿಗೆ ನೌಕರರ ಮುಷ್ಕರ ಮಾಡುತ್ತಿದ್ದರೂ ಸರಕಾರ ಇನ್ನೂ ಮಣಿದಿಲ್ಲ. ನೌಕರರೂ ತಮ್ಮ ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ.

ಬಸ್ಸುಗಳ ಮೇಲಿನ ಕಲ್ಲು ತೂರಾಟವನ್ನು ತಾನು ಮಾಡಿದ್ದೇನೆಂಬ ಆರೋಪವನ್ನು ಅಲ್ಲಗೆಳೆದ ಚಂದ್ರಶೇಖರ್, ಇದೊಂದು ಸುಳ್ಳು ಆರೋಪವಾಗಿದ್ದು, ಸರಕಾರದ ಬಳಿ ದಾಖಲೆಯಿದ್ದರೆ ಕೊಡಲಿ ಎಂದು ಸವಾಲೆಸೆದಿದ್ದಾರೆ. ಜೊತೆಗೆ ಸರಕಾರವು ಮಾತುಕತೆ ನಡೆಸುವ ಉತ್ಸುಕತೆ ತೋರುತ್ತಿಲ್ಲ, ತನ್ನ ಜೊತೆ ಮಾತುಕತೆ ಬೇಡ ಎನ್ನಲು ನಾನೇನು ಉಗ್ರಗಾಮಿಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅದೇ ವೇಳೆ, ಸಾರಿಗೆ ನೌಕರರ ಮುಷ್ಕರಕ್ಕೆ ಸವಾಲೆಂಬಂತೆ, ಬದಲಿಯಾಗಿ ನಾಳೆಯಿಂದ ಖಾಸಗಿ ಬಸ್ಸುಗಳನ್ನು ಬಳಸುವುದಾಗಿ ಸಾರಿಗೆ ಸಚಿವ ಲಕ್ಣ್ಮಣ ಸವದಿ ಹೇಳಿಕೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು