ನಾಳೆ 18 ರಿಂದ 44 ವರ್ಷದೊಳಗಿನವರು ಕೊರೊನಾ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋಗಬೇಡಿ : ಸಚಿವ ಡಾ.ಸುಧಾಕರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ದೇಶದಲ್ಲಿ ಎರಡನೇ ಅಲೆಯ ಭೀತಿಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಕೊರೊನಾ ಲಸಿಕೆ ಒಂದು ರಾಮಾಯಣ ಎಂಬಂತೆ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಮೂರನೇ ಹಂತದ ಲಸಿಕೆ ಅಭಿಯಾನವು ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈ ಹಿಂದೆ  ಘೋಷಿಸಿತ್ತು.

ಹೀಗಾಗಿ ಏಪ್ರಿಲ್ 28 ರಿಂದ 18 ವರ್ಷ ಮೇಲ್ಪಟ್ಟ ಕೋಟ್ಯಾಂತರ ಜನ ಬಹಳ ಉತ್ಸುಕರಾಗಿ ಲಸಿಕೆ ಪಡೆಯಲು ಆನ್ಲೈನ್ ನಲ್ಲಿ ರೆಜಿಸ್ಟ್ರೇಷನ್ ಕೂಡ ಮಾಡಿಸಿದ್ದರು. ಆದರೆ ಇದೀಗ ದೇಶದಲ್ಲಿ ಲಸಿಕೆ ಕೊರತೆ ಇರುವುದರಿಂದ ಕರ್ನಾಟಕ ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳಲ್ಲಿ ಲಸಿಕೆ ನೀಡುತ್ತಿಲ್ಲ ಎಂಬುದು ಗೊತ್ತಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯ ಸರ್ಕಾರ ಸಿರಮ್ ಇನ್ ಸ್ಟಿಟ್ಯೂಟ್ ಗೆ ಲಸಿಕೆ ಪೂರೈಸುವಂತೆ ಮನವಿ ಮಾಡಿದ್ದರೂ ಅದು ಪೂರೈಸಿಲ್ಲ. ಹಾಗಾಗಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಸಾಧ್ಯವಿಲ್ಲ. ರಾಜ್ಯಕ್ಕೆ ಲಸಿಕೆ ಪೂರೈಕೆಯಾದ ಬಳಿಕ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮೂರನೇ ಹಂತದ ಲಸಿಕೆ ಅಭಿಯಾನ ನಾಳೆಯಿಂದ (ಮೇ 1) ರಿಂದ ಆರಂಭವಾಗುತ್ತಿದೆ. ಆದರೆ ಕೊರೊನಾ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ ನಾಳೆ ಯಾರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ, ಹೀಗಾಗಿ ನಾಳೆ 18 ರಿಂದ 44 ವರ್ಷದೊಳಗಿನವರು ಯಾರೂ ಕೂಡ ಕೊರೊನಾ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋಗುವುದು ಬೇಡ. ಆದರೆ 45 ವರ್ಷ ಮೇಲ್ಪಟ್ಟವರಿಗೆ ಯಾವುದೇ ತೊಂದರೆ ಇಲ್ಲ, ಅವರು ಯಥಾಸ್ಥಿತಿಯಲ್ಲಿ ಲಸಿಕೆ ಪಡೆಯಲು ಹೋಗಬಹುದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು