ನಾಡಗೀತೆಗೆ ಕತ್ತರಿ ಹಾಕಲು ಚಿಂತನೆ : ಸಚಿವ ಅರವಿಂದ ಲಿಂಬಾವಳಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಗದಗ : ಕುವೆಂಪು ರಚಿಸಿದ ಕರ್ನಾಟಕ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ ಬಹಳ ದೊಡ್ಡದಾಗಿದೆ.ಹಾಗಾಗಿ ನಾಡಗೀತೆಗೆ ಕತ್ತರಿ ಹಾಕಲು ಚಿಂತನೆ ಮಾಡಲಾಗಿದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಅವರು “ಈ ಹಿಂದೆಯೂ ನಾಡಗೀತೆಯನ್ನು ಕಡಿತ ಮಾಡುವ ಬಗ್ಗೆ ಚಿಂತನೆ ನಡೆದಿತ್ತು.ಈಗಿನ ನಾಡಗೀತೆ ಹಾಡಲು ಹಿರಿಯ ವಯಸ್ಕರು ತುಂಬಾ ಅವಧಿಯವರೆಗೆ ನಿಲ್ಲಬೇಕಾಗುತ್ತದೆ.ಇದು ಅವರಿಗೆ ತುಂಬಾ ಕಷ್ಟವಾಗುತ್ತದೆ. ನಾಡಗೀತೆ ದೊಡ್ಡದಾಗಿರುವುದರಿಂದ ಈ ಎಲ್ಲಾ ಸಮಸ್ಯೆ.

ಆದ್ದರಿಂದ ದೊಡ್ಡದಾದ ನಾಡಗೀತೆಯನ್ನು ಕಡಿಮೆ ಅವಧಿಗೆ ಕಡಿತಗೊಳಿಸಲು ಚಿಂತನೆ ನಡೆಸಿದ್ದೇವೆ.ಇದರ ಬಗ್ಗೆ ಸಾಹಿತಿ ತಜ್ಞರೊಂದಿಗೆ ಸಭೆ ಕರೆದು ಶೀಘ್ರವೇ ತೀರ್ಮಾನ ಮಾಡುತ್ತೇವೆ”ಎಂದು ತಿಳಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು