ಜಗಳಗಳ ರಗಳೆನೇ ಬೇಡ ಎಂದು ಯೋಚಿಸಿತೇ ಸರಕಾರ!? ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಸೇರಿದಂತೆ ಒಟ್ಟು ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಕಿತ್ತಾಟ ನಡೆದು, ಬಹಿರಂಗ ಆರೋಪಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಕೊನೆಗೆ ಶಿಲ್ಪಾ ನಾಗ್ ರಾಜಿನಾಮೆ ಕೊಡಲು ಮುಂದಾಗಿ, ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದರು. ಮಾಧ್ಯಮಗಳೂ ಇವರಿಬ್ಬರ ನಡುವಿನ ವಾಕ್ಸಮರವನ್ನು ನಿರಂತರವಾಗಿ ಫೋಕಸ್ ಮಾಡಿದ್ದವು. ಸೋಷಿಯಲ್ ಮೀಡಿಯಾಗಳಲ್ಲೂ ಇದರ ಬಗೆಗೆ ಚರ್ಚೆ ನಡೆದು, ವಿವಿಧ ಬಣಗಳೇ ಸೃಷ್ಠಿಯಾಗಿದ್ದವು.

ಇವರಿಬ್ಬರ ಜಗಳಕ್ಕೂ ಮೊದಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ ಸಿಂಹ ಸೇರಿದಂತೆ ಹಲವು ರಾಜಕಾರಣಿಗಳು ಟೀಕಿಸಿ ಮಾತನಾಡಿದ್ದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಕ್ರಮ ಭೂ ವ್ಯವಹಾರಗಳ ಕುರಿತು ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಲು ಮುಂದಾಗಿರುವುದೇ ರಾಜಕಾರಣಿಗಳ ಅಸಮಾಧಾನಕ್ಕೆ ಕಾರಣವೆಂಬ ಆರೋಪವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಬರೆದು ಕೊಂಡಿದ್ದರು.

ನಡುವೆ ಇಬ್ಬರು ಐಎಎಸ್‌ ಅಧಿಕಾರಿಗಳ ನಡುವಿನ ಕಿತ್ತಾಟ ಕುರಿತಾಗಿ ಮಾಹಿತಿ ಪಡೆಯಲು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಮೈಸೂರಿಗೆ ಆಗಮಿಸಿದ್ದರು. ಎರಡೂ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿಗಳಿಗೆ ಒಪ್ಪಿಸಿದ್ದಾರೆಂದು ವರದಿಯಾಗಿತ್ತು.

ಪಿ. ರವಿ ಕುಮಾರ್ ಭೇಟಿಯ ಫಲಶ್ರುತಿಯೆಂಬಂತೆ  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಸೇರಿದಂತೆ ಒಟ್ಟು ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಈ ಮೂಲಕ ವರೆಗೆ ಬಿಸಿಬಿಸಿ ಚರ್ಚೆಯಲ್ಲಿದ್ದ ಎಲ್ಲಾ ವಿಚಾರಗಳು ಒಂದೇ ಏಟಿಗೆ ತಣ್ಣಗಾಗಿ ಹೋಗಿದೆ.

ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ| ಬಗಾದಿ ಗೌತಮ್‌ ಎಂಬವರನ್ನೂ, ನೂತನ ಪಾಲಿಕೆ ಆಯುಕ್ತರನ್ನಾಗಿ ಲಕ್ಷ್ಮೀಕಾಂತ್‌ ರೆಡ್ಡಿಯವರನ್ನೂ ನೇಮಿಸಿ ಆದೇಶ ಹೊರಡಿಸಲಾಗಿದೆ. ರೋಹಿಣಿ ಸಿಂಧೂರಿಯವರನ್ನು ಹಿಂದೂ ಮತ್ತು ಧಾರ್ಮಿಕದತ್ತಿ ಇಲಾಖೆಗೆ ವರ್ಗಾಯಿಸಲಾಗಿದ್ದು, ಶಿಲ್ಪಾ ನಾಗ್‌ ಅವರನ್ನು ಗ್ರಾಮೀಣಾಭಿವೃದ್ದಿ ಇಲಾಖೆಯ (ಆಡಳಿತ) ನಿರ್ದೇಶಕರಾಗಿ ನೇಮಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು