ಮೈಸೂರು ಮೇಯರ್ ತಸ್ನೀಂಗೆ ಅವಮಾನ ಮಾಡಿದ ಜಿಲ್ಲಾಧಿಕಾರಿ ರೋಹಿಣಿ!

mayor
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು(21-10-2020): ಮೈಸೂರು ಮೇಯರ್ ತಸ್ನೀಂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ದಸರಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ, ಪ್ರೋಟೊಕಾಲ್ ಪಾಲನೆ ಮಾಡಿಲ್ಲ. ನನಗೆ ಅವಮಾನ ಮಾಡಿದ್ದಾರೆ ಎಂದು ತಸ್ನೀಂ ಹೇಳಿದ್ದಾರೆ.

 

ದಸರಾ ಉದ್ಘಾಟನೆ ಸಂದರ್ಭ ಸಿಎಂಗೆ ಸ್ವಾಗತ ನೀಡುವಾಗ ಮೈಸೂರಿನ ಪ್ರಥಮ ಪ್ರಜೆಗೆ ಅವಕಾಶ ನೀಡಬೇಕು. ಆದರೆ ನಾವು ಸಿಎಂನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗ, ಮೇಯರ್ ಅವರನ್ನು ಒಳಗೆ ಬಿಡಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ.

 

ದಸರಾ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ಮೇಯರ್ ಆಸನ ಇಡಬೇಕು. ಆದರೆ ಕೊನೆಯಲ್ಲಿ ನಮಗೆ ನೀಡಿದ್ದಾರೆ. ಎರಡೂ ಸಂದರ್ಭ ಅವಮಾನ ಮಾಡಿದ್ದಾರೆ ಎಂದು ತಸ್ನೀಂ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಸ್ವಾಗತ ಮಾಡುವಾಗಲೂ ಉಪಮಹಾಪೌರರು ಮತ್ತು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಿಗೆ ಸ್ವಾಗತ ಕೋರುವುದಿಲ್ಲ. ನಿಮ್ಮ ನಡೆ ಯಾಕೆ ಈಗೆ? ಯಾರಿಗೆ ಬೇಕಾಗಿ ಈ ಓಲೈಕೆ ಎಂದು ತಸ್ನೀಂ ಪ್ರಶ್ನಿಸಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು